ಮಾಜಿ ಮಿಸ್​ ಇಂಡಿಯಾಗೆ 99 ಸಾವಿರ ರೂ. ಟೋಪಿ ಹಾಕಿದ ಸೈಬರ್​ ಖದೀಮರು!

99
Published on

ಆಗ್ರಾ: ಮಾಜಿ ಮಿಸ್​ ಇಂಡಿಯಾ ವಿಜೇತೆಯೊಬ್ಬರಿಗೆ ಸಿಬಿಐ ಅಧಿಕಾರಿಗಳಂತೆ ವರ್ತಿಸಿ ಎರಡು ಗಂಟೆಗಳ ಕಾಲ ಡಿಜಿಟಲ್​ ಅರೆಸ್ಟ್​ ಮಾಡುವ ಮೂಲಕ 99,000 ರೂ.ಗಳನ್ನು ಸೈಬರ್ ಖದೀಮರು​ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಂಕಿತಾ ದೀಕ್ಷಿತ್​​ ವಂಚನೆಗೆ ಒಳಗಾದ ಆಗ್ರಾ ಮೂಲದ ಮಾಜಿ ಮಿಸ್​​ ಇಂಡಿಯಾ(2017). ಶಿವಂಕಿತಾ ದೀಕ್ಷಿತ್​ಗೆ ಕರೆ ಮಾಡಿದ ಸೈಬರ್​ ವಂಚಕರು, '' ಮಾನವ ಕಳ್ಳಸಾಗಣಿಕೆ ಮತ್ತು ಮಾದಕವಸ್ತು ಕಳ್ಳಸಾಗಣಿಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀವು (ಶಿವಂಕಿತಾ ದೀಕ್ಷಿತ್) ಭಾಗಿಯಾಗಿ ಆಕ್ರಮ ಹಣ ಪಡೆದಿದ್ದಿರಿ ಎಂದು ಆರೋಪಿಸಿದ್ದಾರೆ. ಬಳಿಕ ಸಿಬಿಐ ಅಧಿಕಾರಿಗಳಂತೆ ಬಟ್ಟೆ ಧರಿಸಿ ವಾಟ್ಸಪ್​​ ಕಾಲ್​ ಮಾಡಿದ್ದಾರೆ. ನಿಮ್ಮನ್ನೂ ಯಾವಾಗ ಬೇಕಾದರೂ ಬಂಧಿಸಬಹದು. ಈ ಬಂಧನದಿಂದ ತಪ್ಪಿಸಲು 2.5 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ. ವಂಚಕರ ಬೆದರಿಕೆಯನ್ನು ನಂಬಿದ ದೀಕ್ಷಿತ್​ 2.5 ಲಕ್ಷ ರೂ. ಪಾವತಿಸಲು ಮುಂದಾಗಿದ್ದಾರೆ. ಆದರೆ, 99,000 ರೂ. ಮಾತ್ರ ಪೇ ಮಾಡಲು ಲಿಮಿಟ್ ಇದೆ. ಹೀಗಾಗಿ, ಇದನ್ನು ಪೇ ಮಾಡುವೆ ಎಂದು ವಂಚರಕ ಖಾತೆಗೆ 99,000 ರೂ ಹಾಕಿದ್ದಾರೆ'' ಎಂದು ಸಹಾಯಕ ಪೊಲೀಸ್​ ಆಯುಕ್ತ ಮಯಾಂಕ್​ ತಿವಾರಿ ಹೇಳಿದರು.

ಬಳಿಕ ಈ ವಿಷಯವನ್ನು ತಮ್ಮ ತಂದೆ ತಾಯಿಗೆ ತಿಳಿಸಿದಾಗ ವಂಚನೆ ಒಳಗಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ದೀಕ್ಷಿತ್​ ತಂದೆ ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಜಿಟಲ್​ ಬಂಧನ ಎಂದರೇನು?

ಸೈಬರ್​ ಕೈಮ್​ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇತ್ತೊಂದು ಹೊಸ ಪದವನ್ನು ಬಳಸುತ್ತಿದ್ದಾರೆ. ಕೆಲ ವಂಚಕರು ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಬಂಧನದ ಬೆದರಿಕೆ ಹಾಕುವ ಹೊಸ ವಿಧಾನವೆ ಡಿಜಿಟಲ್​ ಬಂಧನ(ಏಜೆನ್ಸಿಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net