ಎರಡೂವರೆ ವರ್ಷದ ಬಾಲಕಿಯ ಮೇಲೆ ದೌರ್ಜನ್ಯ! ಮೂವರು ಮಹಿಳೆಯರ ಬಂಧನ | Abusing

abusing
Published on

ಕೇರಳ: ಎರಡೂವರೆ ವರ್ಷದ ಬಾಲಕಿಯ ಮೇಲೆ ದೌರ್ಜನ್ಯ (Abusing)ಎಸಗಿದ ಆರೋಪದಡಿ ಕೇರಳದ ಸರ್ಕಾರದ ಅಧಿನದಲ್ಲಿ ನಡೆಯುತ್ತಿರುವ ಮಕ್ಕಳ ಸಂಸ್ಥೆಯ ಮೂವರು ಅರೈಕೆದಾರರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಅಜಿತಾ, ಮಹೇಶ್ವರಿ ಮತ್ತು ಸಿಂಧು ಎಂದು ಗುರುತಿಸಲಾಗಿದೆ. ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯ ಅಡಿಯಲ್ಲಿ ಈ ಮೂವರು ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲಿಸರು ಕೈಗೊಂಡಿದ್ದಾರೆ.

ಹಾಸಿಗೆ ಒದ್ದೆ ಮಾಡಿದ್ದಕ್ಕಾಗಿ ಮಗುವಿನ ಖಾಸಗಿ ಭಾಗಗಳಲ್ಲಿ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅನಾರೋಗ್ಯದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಬೆರಳಿನ ಉಗುರು ಗುರುತುಗಳು ಕಂಡುಬಂದಿವೆ ಎಂದು ವರದಿಯಾಗಿದೆ.

ಮಕ್ಕಳ ಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಗೋಪಿ ಪ್ರಕಾರ, ಘಟನೆಯ ವಾರದಲ್ಲಿ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಅವರ ತಂದೆ- ತಾಯಿ ನಿಧನರಾದಾಗಿನಿಂದ ಹುಡುಗಿ ಮತ್ತು ಅವಳ ಕಿರಿಯ ಸಹೋದರಿ ಇಲ್ಲಿ ಸರ್ಕಾರಿ ಮಕ್ಕಳ ಸಂಸ್ಥೆಯ ಸೌಲಭ್ಯದಲ್ಲಿ ಉಳಿದುಕೊಂಡಿದ್ದರು ಎಂದು ಹೇಳಿದ್ದಾರೆ, (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net