ಮುಂಬೈ: ರಾಜಕಾರಣಿ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈಯುವ ಮುಂಚೆನೆ ನಟ ಸಲ್ಮಾನ್ ಖಾನ್(Salman) ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಇದೀಗ ಸಿದ್ದಿಕಿ ಕೊಂದ ಶೂಟರ್ಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಾಬಾ ಸಿದ್ದಿಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸಲ್ಮಾನ್ ಖಾನ್ ಶೂಟರ್ಗಳ ಹಿಟ್ಲಿಸ್ಟ್ನಲ್ಲಿದ್ದರು. ಆದರೆ, ಸಲ್ಮಾನ್ ಅವರಿಗೆ ಬಿಗಿಭದ್ರತೆ ಹಿನ್ನೆಲೆ ಹತ್ಯೆಗೈಯಲು ಸಾಧ್ಯವಾಗಲಿಲ್ಲ ಎಂದು ವರದಿ ಉಲ್ಲೇಖಿಸಿವೆ.
ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್ ಏಕಸದಸ್ಯ ಪೀಠ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದ ವಿಭಾಗೀಯ ಪೀಠ
ಕಳೆದ ಎರಡು ತಿಂಗಳಿಂದೆ ಅಂದರೆ ಇದೇ ಅ.12ರಂದು ಇಲ್ಲಿನ ಬಾಂದ್ರಾದಲ್ಲಿ ಬೈಕ್ನಲ್ಲಿ ಬಂದ ಮೂವರು ಶೂಟರ್ಗಳು ಬಾಬಾ ಸಿದ್ದಿಕಿ(66) ಅವರ ಎದೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಸಮೀಪ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ, ತನಿಖೆ ವೇಳೆ ಹಲವು ಮಹತ್ವದ ಸುಳಿವುಗಳನ್ನು ಬಂಧಿತರು ಬಾಯ್ಬಿಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಲ್ಮಾನ್ ಖಾನ್ ಹತ್ಯೆಗೈಯು ಸಂಚು ಇದೇ ಮೊದಲಲ್ಲ
ಸಲ್ಮಾನ್ ಖಾನ್ ಹತ್ಯೆಗೈಯಲು ಸಂಚು ರೂಪಿಸುವುದು ಇದೇ ಮೊದಲಲ್ಲ. ಇತ್ತೀಚಿಗೆ ಬಾಂದ್ರಾದ ಅವರ ನಿವಾಸದ ಬಳಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಆದರೆ, ಸಲ್ಮಾನ್ ಪ್ರಾಣಪಾಯದಿಂದ ಪಾರಾಗಿದ್ದರು. ಆರೋಪಿಗಳನ್ನು ಗುಜರಾತ್ನಲ್ಲಿ ಬಂಧಿಸಲಾಗಿತ್ತು. ಈ ಘಟನೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮಾಡಿರುವುದಾಗಿ ಒಪ್ಪಿಕೊಂಡಿತ್ತು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬಿಷ್ಣೋಯಿ ಗ್ಯಾಂಗ್ನಿಂದ ಮತ್ತು ಇತರರಿಂದ ಹತ್ಯೆಗೈವುದಾಗಿ ಬೆದರಿಕೆಯ ಹಲವು ಕರೆಗಳು ಸಲ್ಮಾನ್ಗೆ ಬರುತ್ತಿರುವ ಘಟನೆಗಳು ನಡೆಯುತ್ತಿವೆ.
ವಿವಾಹ ವಾರ್ಷಿಕೋತ್ಸವ ದಿನವೇ ಪೋಷಕರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪುತ್ರ! ಆತ ಕೊಟ್ಟ ಕಾರಣ ಕೇಳಿದ್ರೆ…