ನವದೆಹಲಿ: ಒಂದೇ ಕುಟುಂಬದ ಮೂವರನ್ನು ಕೊಲೆ ಪ್ರಕರಣಕ್ಕೆ ಇದೀಗ ಶಾಕಿಂಗ್ ಟ್ವಿಸ್ಟ್ ಸಿಕ್ಕಿದ್ದು, ಹತ್ಯೆಗೈದ ಆರೋಪಿ ಬೇರಾರೂ ಅಲ್ಲ ಮೃತ ದಂಪತಿಯ ಮಗ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಕೊಲೆಗೈದ ವ್ಯಕ್ತಿಯನ್ನು ಅರ್ಜುನ್ ಎಂದು ಹೇಳಲಾಗಿದ್ದು, ಈತ ಮೃತ ದಂಪತಿಯ ಮಗ ಎಂದು ಪೊಲೀಸರ ವರದಿಯಲ್ಲಿ ಉಲ್ಲೇಖವಾಗಿದೆ. ಬುಧವಾರ 6:30ರ ಸುಮಾರಿಗೆ ಬೆಳಗ್ಗೆ ವಾಕಿಂಗ್ ಮುಗಿಸಿ ಹಿಂತಿರುಗಿದ ಪೋಷಕರು ನಂತರ ಪತ್ತೆಯಾಗಿದ್ದು ಶವವಾಗಿ ಎಂದು ಹೇಳಿದ್ದ ಅರ್ಜುನ್ (Son Stabs), ಈಗ ಆರೋಪಿಯಾಗಿ ಪೊಲೀಸರ ಮುಂದೆ ಕುಳಿತಿದ್ದಾನೆ.
ಇದನ್ಣೂ ಓದಿ: ಮುಡಾ ಹಗರಣ: ಹೈಕೋರ್ಟ್ ಏಕಸದಸ್ಯ ಪೀಠ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದ ವಿಭಾಗೀಯ ಪೀಠ
ಶುಭ ದಿನವೇ ಅಶುಭ
ತನ್ನ ತಂದೆ-ತಾಯಿ ಮತ್ತು ತಂಗಿ ಕೊಲೆಯಾಗಿದ್ದಾರೆ ಎಂದು ಅಕ್ಕ-ಪಕ್ಕದ ಮನೆಯವರಿಗೆ ಹೇಳಿ, ತಾನು ಅಮಾಯಕನಂತೆ ವರ್ತಿಸಿದ್ದ ಅರ್ಜುನ್, ಈ ಕ್ರೂರ ಹತ್ಯೆಯ ಮಾಸ್ಟರ್ ಮೈಂಡ್ ತಾನೇ ಎಂಬುದನ್ನು ಇದೀಗ ದೆಹಲಿ ಪೊಲೀಸರು ತನಿಖೆಯಲ್ಲಿ ಬಾಯ್ಬಿಡಿಸಿದ್ದಾರೆ. ನಿವೃತ್ತ ಸೇನಾ ಅಧಿಕಾರಿ ರಾಜೇಶ್ ಕುಮಾರ್ (51) ಮತ್ತು ಅವರ ಪತ್ನಿ ಕೋಮಲ್ (46) ತಮ್ಮ 27ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ದಿನವೇ ಈ ಹತ್ಯೆ ಸಂಭವಿಸಿದೆ. ದಂಪತಿಗಳು ತಮ್ಮ ಪುತ್ರಿ ಕವಿತಾ (23) ಜತೆಗೆ ದಕ್ಷಿಣ ದೆಹಲಿಯ ಡಿಯೋಲಿ ಗ್ರಾಮದ ತಮ್ಮ ನಿವಾಸದಲ್ಲಿ ಚಾಕು ಇರಿತಕ್ಕೆ ಬಲಿಯಾಗಿದ್ದಾರೆ.
ಕೊಲೆಗೆ ಇದೇ ಕಾರಣ
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಅರ್ಜುನ್, ತನ್ನ ಹೆತ್ತ ತಂದೆ-ತಾಯಿ ಮತ್ತು ಸಹೋದರಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ನೆರೆಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ, ನನ್ನ ಕುಟುಂಬದವರನ್ನು ಯಾರೋ ಕೊಲೆ ಮಾಡಿಬಿಟ್ಟಿದ್ದಾರೆ ಎಂದು ನಾಟಕವಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರಿಗೆ ಅರ್ಜುನ್ ನಡೆ-ನುಡಿಯಲ್ಲಿ ಗೊಂದಲವಿರುವುದು ಗೊತ್ತಾಗಿದೆ. ಈ ಹಿನ್ನಲೆ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಿರಂತರ ವಿಚಾರಣೆಯಲ್ಲಿ ಕಡೆಗೂ ತನ್ನ ತಪ್ಪೊಪ್ಪಿಕೊಂಡ ಆರೋಪಿ, ತಂದೆ-ತಾಯಿ ಮತ್ತು ತಂಗಿ ಜೊತೆಗಿನ ಸಂಬಂಧ ಹಳಸಿದ ಕಾರಣದಿಂದ ಬೇಸತ್ತು ಕೊಲೆ ಮಾಡಿದೆ ಎಂದು ಹೇಳಿದ್ದಾನೆ,(ಏಜೆನ್ಸೀಸ್).
ಬಲವಂತದ ಮದುವೆ, ಐಟಂ ಸಾಂಗ್ಗಳಿಂದಲೇ ಜೀವನ; ‘ಸಿಲ್ಕ್’ ಆಗಿ ಮಿಂಚಿದ ಸ್ಮಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ!