ಮದುವೆ ನಿರಾಕರಿಸಿದಕ್ಕೆ ಅತ್ಯಾಚಾರ

Gang Rape
Published on

ಬೆಂಗಳೂರು: ಮದುವೆಗೆ ನಿರಾಕರಿಸದ ಕಾರಣಕ್ಕೆ ಪರಿಚಿತ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಂತ್ರಸ್ತೆಯ ಸ್ನೇಹಿತ ಸೇರಿ ಐವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಐವರು ಬಂಧಿತರು. ಇತ್ತೀಚಿಗೆ ತನ್ನ ಸ್ನೇಹಿತೆಯನ್ನು ಗೆಳೆಯರ ಜತೆ ಸೇರಿ ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಹೋಟೆಲ್‌ನಲ್ಲಿ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು.ಇತ್ತೀಚಿಗೆ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಸಂತ್ರಸ್ತೆ, ಗೆಳೆಯನಿಂದ ದೂರವಾಗಲು ಯತ್ನಿಸಿದ್ದಳು. ಇದರಿಂದ ಆರೋಪಿ ಬೇಸರಗೊಂಡಿದ್ದ. ಮದುವೆ ಆಗುವಂತೆ ಗೆಳೆಯ ಒತ್ತಾಯ ಮಾಡುತ್ತಿದ್ದ. ಇದಕ್ಕೆ ಸಂತ್ರಸ್ತೆ ತಿರಸ್ಕಸಿದ್ದಳು.

ಏ.20ರಂದು ಆರೋಪಿ, ತನ್ನ ಸ್ನೇಹಿತರೊಂದಿಗೆ ಬಂದು ಕಾರಿನನಲ್ಲಿ ಯುವತಿಯನ್ನು ಅಪಹರಣ ಮಾಡಿ ಚಿತ್ರದುರ್ಗಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ದುಷ್ಕೃತ್ಯಕ್ಕೆ ಸ್ನೇಹಿತರು ಸಾಥ್ ಕೊಟ್ಟಿದ್ದರು. ಈ ಬಗ್ಗೆ ಸಂತ್ರಸ್ತೆ ಕೊಟ್ಟ ದೂರಿನ ಮೇಲೆ ಎಲ್ಲರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net