

ಬೆಂಗಳೂರು: ಸಿನಿಮಾ ನಟಿಗೆ ಮತ್ತು ಬರುವ ಔಷಧ ಬೆರೆಸಿದ್ದ ತಂಪುಪಾನೀಯ ಕುಡಿಸಿ ಖಾಸಗಿ ಕಂಪನಿ ಸಿಇಒ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾನೆ. ಇದರಿಂದ ನೊಂದ ನಟಿ ನ್ಯಾಯಕ್ಕಾಗಿ ಜಗಜೀವನ್ರಾಮ್ಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜೆ.ಜೆ. ನಗರದ ಖಾಸಗಿ ಅಪಾರ್ಟ್ ಮೆಂಟ್ ನಿವಾಸಿಯಾಗಿರುವ 30 ವರ್ಷದ ನಟಿ ಸಂತ್ರಸ್ತೆ. ಅವರು ಕೊಟ್ಟ ದೂರಿನ ಮೇರೆಗೆ ನಾಯಂಡಹಳ್ಳಿಯ ಮೋಹಿತ್ ಮತ್ತು ಆತನ ತಂದೆ ಮಹದೇವ್, ತಾಯಿ ನಾಗವೇಣಿ ಮತ್ತು ರಾಹುಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯನ್ನು ತಲ್ಲಣಗೊಳಿಸಿದೆ ಕರೊನಾ
ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲೂ ಅಭಿನಯಿಸಿರುವ ನಟಿಗೆ 2018ರಲ್ಲಿ ಗಾಂಧಿಬಜಾರ್ ಕಾಫಿ ಡೇ ಹೋಗಿದ್ದಾಗ ಮೋಹಿತ್ ಪರಿಚಯವಾಗಿದ್ದ. ಮೆಕಾಫ್ಲೈ ಕಂಪನಿ ಸಿಇಒ ಎಂದು ಹೇಳಿಕೊಂಡಿದ್ದು, ಕೆಲ ತಿಂಗಳ ನಂತರ ಕಂಪನಿ ಪ್ರಚಾರ ರಾಯಭಾರಿಯಾಗಿ ನಟಿಯನ್ನು ನೇಮಿಸಿಕೊಂಡಿದ್ದ. 2019ರ ಜ. 15ರಂದು ಗೋವಾಕ್ಕೆ ಕರೆದೊಯ್ದು ಫೋಟೋಶೂಟ್ ಮಾಡಿಸಿದ್ದ. ಕಂಪನಿಯಲ್ಲಿ ಆರ್ಥಿಕ ಸಮಸ್ಯೆಯಾಗಿದೆ ಎಂದು ಹೇಳಿ 1.50 ಲಕ್ಷ ರೂ. ಪಡೆದಿದ್ದ. ಕಳೆದ ವರ್ಷ ಜೂ. 22ರಂದು ಮೋಹಿತ್ ಹುಟ್ಟುಹಬ್ಬವಿತ್ತು. ಸಬೂಬು ಹೇಳಿ ನಟಿಯ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಅದರ ಮರುದಿನ ನಟಿಯ ಹುಟ್ಟುಹಬ್ಬವಿತ್ತು. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದು, ಬಳಿಕ ಮೋಹಿತ್ ನಟಿಗೆ ತಂಪು ಪಾನೀಯ ಕುಡಿಸಿದ್ದ. ಅದನ್ನು ಸೇವಿಸಿದ ನಂತರ ಕೊಠಡಿಗೆ ತೆರಳಿ ನಿದ್ದೆಗೆ ಜಾರಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆದರಿಸಿ 20 ಲಕ್ಷ ರೂಪಾಯಿ ವಸೂಲಿ: ಜೂ. 24ರಂದು ಮೋಹಿತ್ ಮತ್ತೆ ನಟಿ ಮನೆಗೆ ಹೋಗಿದ್ದು, ‘ನಿನ್ನೆ ನಿನ್ನ ಮೇಲೆ ಅತ್ಯಾಚಾರ ಎಸಗಿದ್ದೇನೆ. ಆ ಎಲ್ಲ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದೇನೆ. ಕೇಳಿದಾಗಲೆಲ್ಲ ಹಣ ಕೊಡಬೇಕು. ಇಲ್ಲವಾದರೆ ಜಾಲತಾಣದಲ್ಲಿ ಹರಿಬಿಡುತ್ತೇನೆ’ ಎಂದು ಬೆದರಿಸಿದ್ದ. ಆತನ ಮಾತಿಗೆ ಹೆದರಿದ ನಟಿ 11 ಲಕ್ಷ ರೂ. ಕೊಟ್ಟಿದ್ದಾರೆ. ನಂತರವೂ ಬ್ಲಾ್ಯಕ್ವೆುೕಲ್ ಮಾಡಿ 9 ಲಕ್ಷ ರೂ. ತೆಗೆದುಕೊಂಡು ಮತ್ತೊಮ್ಮೆ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಆತನ ಪಾಲಕರಿಗೆ ತಿಳಿಸಿದಾಗ, ಅವರೆಲ್ಲ ಸೇರಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ನಟಿ ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.