More

    ಇಂದಿನಿಂದ ವಾರದ ಲಾಕ್​ಡೌನ್

    ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೂ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ನಗರದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಜನದಟ್ಟಣೆ ತಪ್ಪಿಸುವ ಸಲುವಾಗಿ ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

    ಈಗಾಗಲೇ ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಲಾಕ್​ಡೌನ್ ವೇಳೆ ಸುಖಾಸುಮ್ಮನೆ ಮನೆಯಿಂದ ಹೊರಬಂದರೆ ಮುಲಾಜಿಲ್ಲದೆ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಕೇಸ್ ದಾಖಲಿಸಿ ದಂಡ ವಿಧಿಸಲಿದ್ದಾರೆ. ನಗರದೆಲ್ಲೆಡೆ ನಾಕಾಬಂದಿ ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಭಾನುವಾರ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳು ಮತ್ತು ಸೇವೆ ಮಾತ್ರ ಸಿಗಲಿದೆ. ಅನಾವಶ್ಯಕವಾಗಿ ಹೊರಬಂದರೆ ಕೇಸ್ ದಾಖಲಿಸಲಾಗುವುದು.

    | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ

    ಸರಕು ಸಾಗಣೆ ಮತ್ತು ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಉಳಿದಂತೆ, ಪಾಸ್ ಇರುವುದಾಗಿ ಹೇಳಿಕೊಂಡು ರಸ್ತೆಗಿಳಿದರೆ ಕೇಸ್ ದಾಖಲಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಇದನ್ನೂ ಓದಿ: ರಸ್ತೆ-ಮನೆಯಲ್ಲೇ ಕರೊನಾ ಮರಣಮೃದಂಗ

    ಏನೆಲ್ಲ ಸೌಲಭ್ಯ ಇರಲಿದೆ?: ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹೋಟೆಲ್ (ಪಾರ್ಸೆಲ್), ತರಕಾರಿ ಅಂಗಡಿ, ಮಾಂಸದಂಗಡಿ, ಹಾಲು ಹಾಗೂ ಪೊಲೀಸ್, ವೈದ್ಯಕೀಯ, ಮಾಧ್ಯಮ ಸೇವೆ ಸಿಗಲಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

    ಯಾವ್ಯಾವ ಸೇವೆಗಳು ಇರಲ್ಲ?: ಬಿಎಂಟಿಸಿ, ಕೆಎಸ್​ಆರ್​ಟಿಸಿ, ಕ್ಯಾಬ್, ಆಟೋ ಸೇವೆ ಇರುವುದಿಲ್ಲ. ವಾಣಿಜ್ಯ ಮಳಿಗೆ ಇನ್ನಿತರ ಅಂಗಡಿಗಳು ಸಂಪೂರ್ಣ ಬಂದ್ ಆಗಿರಲಿವೆ.

    ಇಂದು ಸರ್ಕಾರಿ ನೌಕರರಿಗೆ ರಜೆ: ಕರೊನಾ ಸೋಂಕು ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ 1 ಮತ್ತು 3ನೇ ಶನಿವಾರವೂ ಸರ್ಕಾರಿ ನೌಕರರಿಗೆ ರಜೆ ಘೋಷಣೆ ಮಾಡಿದೆ. ಆಗಾಗಿ ಶನಿವಾರ ಸರ್ಕಾರಿ ಕಚೇರಿಗಳ ಸೇವೆ ಇರುವುದಿಲ್ಲ.

    ರಾಜಧಾನಿಯನ್ನು ತಲ್ಲಣಗೊಳಿಸಿದೆ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts