ರಣವೀರ್ ಅಲ್ಲಾಬಾಡಿಯಾಗೆ ಮುಂಬೈ ಪೊಲೀಸರಿಂದ ಸಮನ್ಸ್​ ಜಾರಿ; ಕಾರಣ ಹೀಗಿದೆ.. | Ranveer Allahbadia

Untitled design (11)
Published on

ಮುಂಬೈ: ರಣವೀರ್ ಅಲ್ಲಾಬಾಡಿಯಾ ಕಾರ್ಯಕ್ರಮವೊಂದರಲ್ಲಿ ಮಾಡಿರುವ ವಿವಾದಾತ್ಮಕ ಹೇಳಿಕೆಯಿಂದ ಎದ್ದಿರುವ ಬಿರುಗಾಳಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ತನ್ನ ಹೇಳಿಕೆ ವೈರಲ್​ ಆದ ಬಳಿಕ ರಣವೀರ್ ಅಲ್ಲಾಬಾಡಿಯಾ( Ranveer Allahbadia) ಕ್ಷಮೆಯಾಚಿಸಿದ್ದರು. ಆದರೆ ವಿಚಾರಕ್ಕೆ ಸಂಬಂಧಿಸಿದಂತೆ ರಣವೀರ್ ಅಲ್ಲಾಬಾಡಿಯಾ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ವಿರುದ್ಧ ಮುಂಬೈ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ.

ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಬಾಡಿಯಾ ಮತ್ತು ಯೂಟ್ಯೂಬರ್ ಸಮಯ್ ರೈನಾ ಅವರನ್ನು ಸಂಪರ್ಕಿಸಲಾಗಿದೆ ಎಂದು ಮುಂಬೈ ಪೊಲೀಸರು ಮಂಗಳವಾರ(ಫೆಬ್ರವರಿ 11) ತಿಳಿಸಿದ್ದಾರೆ. ಮುಂಬೈ ಪೊಲೀಸರು ಈಗಾಗಲೇ ತನಿಖೆಗೆ ಸಹಕರಿಸುವಂತೆ ರಣವೀರ್ ಅವರನ್ನು ಕೇಳಿಕೊಂಡಿದ್ದರು. ಈಗ ವರ್ಸೋವಾ ಪೊಲೀಸರು ವಿಚಾರಣೆ ನಡೆಸಲು ಅವರ ಮನೆಗೆ ತಲುಪಿದ್ದಾರೆ. ಇಲ್ಲಿಯವರೆಗೂ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ಕೂಡ ಅಲ್ಲಾಬಾಡಿಯಾ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ.

ರಣವೀರ್ ಅಲ್ಲಾಬಾಡಿಯಾ ವಿರುದ್ಧ ಮೊದಲು ಪ್ರಕರಣ ದಾಖಲಾಗಿತ್ತು. ಈಗ ಐಟಿ ವ್ಯವಹಾರಗಳ ಸಂಸದೀಯ ಸಮಿತಿಯು ರಣವೀರ್ ಅಲ್ಲಾಬಾಡಿಯಾಗೆ ನೋಟಿಸ್ ಕಳುಹಿಸುವ ಬಗ್ಗೆ ಯೋಚಿಸುತ್ತಿದೆ. ಇದಲ್ಲದೆ ಸಮಿತಿಯು ರಣವೀರ್ ಅಲ್ಲಾಬಾಡಿಯಾ ಸಮನ್ಸ್ ಜಾರಿ ಮಾಡಬಹುದು ಎನ್ನಲಾಗಿದೆ. ಸಮಿತಿ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಸಮನ್ಸ್​ ನೀಡುವಂತೆ ಒತ್ತಾಯಿಸಿದರು. ಈ ವಿಷಯದ ಬಗ್ಗೆ ಅನೇಕ ಸಂಸದರು ದೂರು ನೀಡಿದ್ದು, ನಂತರ ನೋಟಿಸ್ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಸಮಯ್ ರೈನಾ ಅವರ ಕಾರ್ಯಕ್ರಮದ ಸಂಚಿಕೆ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಅಲ್ಲಾಬಾಡಿಯಾ ಮತ್ತು ಇಂಡಿಯಾಸ್ ಗಾಟ್ ಲ್ಯಾಟೆಂಟ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ರಣವೀರ್ ಅವರ ಅನ್‌ಸಬ್‌ಸ್ಕ್ರೈಬ್ ಅನ್ನು ಪ್ರಾರಂಭಿಸಿದರು. ರಣವೀರ್ ಅಲ್ಲಾಬಾಡಿಯಾ ಪಡೆಯುತ್ತಿರುವ ಜನಪ್ರಿಯತೆಗೆ ಅವರು ಅರ್ಹರಲ್ಲ ಎಂದು ನೆಟಿಗರು ಹೇಳುತ್ತಿದ್ದಾರೆ.

ವಿಷಯ ಏನು

ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಇತ್ತೀಚೆಗೆ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ, ರಣವೀರ್ ಅಲ್ಲಾಬಾಡಿಯಾ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರು ಪಾಲಕರ ಬಗ್ಗೆ ತುಂಬಾ ಆಕ್ಷೇಪಾರ್ಹವಾದ ಮಾತನ್ನು ಹೇಳಿದರು. ಇದಾದ ನಂತರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಟೀಕಿಸಲಾಯಿತು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚಾದವು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net