

Ranveer Allahabadia: ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಯೂಟ್ಯೂಬರ್ ಅಲ್ಲಹಬಾದಿಯಾ ಅವರಿಗೆ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್, ಅವರ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿದೆ, ಅಲ್ಲದೆ, ಅಂತಹ ನಡವಳಿಕೆಯನ್ನು ಖಂಡಿಸಬೇಕು ಎಂದು ಹೇಳಿದೆ.
ಪಾಡ್‌ಕ್ಯಾಸ್ಟರ್ ಮನಸ್ಸಿನಲ್ಲಿ ''ಏನೋ ತುಂಬಾ ಕೊಳಕು" ಇದ್ದು, ಅದನ್ನು ಅವರು ಕಾರ್ಯಕ್ರಮದಲ್ಲಿ 'ವಾಂತಿ' ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ.
ಇಂತಹ ನಡವಳಿಕೆಯನ್ನು ಖಂಡಿಸಲೇಬೇಕು. ನೀವು ಜನಪ್ರಿಯರಾಗಿದ್ದೀರಿ ಎಂಬ ಕಾರಣಕ್ಕೆ ಸಮಾಜವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಭಾಷೆಯನ್ನು ಬಯಸುವ ಯಾರಾದರೂ ಭೂಮಿಯ ಮೇಲೆ ಇದ್ದಾರೆಯೇ? ಅವನ ಮನಸ್ಸಿನಲ್ಲಿ ಏನೋ ಕೊಳಕಾಗಿದ್ದು, ಅದನ್ನು ವಾಂತಿ ಮಾಡಲಾಗಿದೆ. ನಾವು ಅವನನ್ನು ಏಕೆ ರಕ್ಷಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು ಅಲ್ಲಾಬಾದಿಯ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡಿದೆ.
ಯೂಟ್ಯೂಬ್‌ನಲ್ಲಿ ನಡೆದ ಕಾರ್ಯಕ್ರಮದ ಸಮಯದಲ್ಲಿ ತಾನು ಮಾಡಿದ ಅಸಹ್ಯಕರ ಕಾಮೆಂಟ್‌ಗಳ ಕುರಿತು ದಾಖಲಾಗಿರುವ ಎಫ್‌ಐಆರ್‌ಗಳ ರದ್ದು ಕೋರಿ ಅಲ್ಲಹಬಾದಿಯಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ತನ್ನ ಅಭಿಪ್ರಾಯ ತಿಳಿಸಿದೆ.(ಏಜೆನ್ಸೀಸ್)