Aadhaar:ನಮ್ಮ ದೇಶದಲ್ಲಿ ಆಧಾರ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಇಲ್ಲದಿದ್ದರೆ ಏನು ಇಲ್ಲ ಎಂಬಂತೆ ನಮ್ಮೆಲ್ಲರಿಗೂ ಭಾಸವಾಗುತ್ತದೆ. ಅನೇಕ ಬಾರಿ ಆಧಾರ್ ಕಳೆದೋಗುತ್ತದೆ ಮತ್ತು ಹಾನಿಯಾಗುತ್ತೆ ಎಂಬ ಭಯದಿಂದ ಅದನ್ನು ನಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ದರೆ ಅಥವಾ ಒರಿಜಿನಲ್ ಕಾರ್ಡ್ ಹೊರ ತರದೆ ಇದ್ದರೆ ವರ್ಚುವಲ್ ಆಧಾರ್(ನಕಲು) ಡೌನ್‌ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ:ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದಿರಾ; ಇಲ್ಲಿದೆ ಅದರ ಹಿಂದಿನ ಕಾರಣದ ಮಾಹಿತಿ| Health Tips
ಈ ವರ್ಚುವಲ್ ಆಧಾರ್ ಒರಿಜಿನಲ್ನ ನಕಲು ಪ್ರತಿಯಾಗಿದ್ದು, ಒರಿಜಿನಲ್ನಂತೆ ಎಲ್ಲಾ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತೆ. ಹೀಗಾಗಿ, ಇದನ್ನೂ ಇಂದೇ ಡೌನ್‌ಲೋಡ್ ಮಾಡಿಕೊಳ್ಳಿ. ಇನ್ನು ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. UIDAI ಪ್ರಕಾರ, ವರ್ಚುವಲ್ ಆಧಾರ್ ಅಥವಾ ಇ-ಆಧಾರ್ ಕೂಡ ಆಧಾರ್ ಕಾರ್ಡ್‌ನಂತೆ ಎಲ್ಲೆಡೆ ಮಾನ್ಯವಾಗಿರುತ್ತದೆ. ಅದನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ಓದಿಕೊಳ್ಳಿ..
ವರ್ಚುವಲ್ ಆಧಾರ್ ಡೌನ್‌ಲೋಡ್ ಮಾಡುವ ಪ್ರಕ್ರಿಯೆ…
ಮೊದಲು UIDAI ವೆಬ್‌ಸೈಟ್‌ಗೆ ಹೋಗಿ..
ಇದಾದ ನಂತರ, ನನ್ನ ಆಧಾರ್ ವಿಭಾಗಕ್ಕೆ ಹೋಗಿ ಮತ್ತು ಡೌನ್‌ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ.
ಇದರ ನಂತರ, ಮುಂದಿನ ಪುಟದಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ನಂತರ ವಿನಂತಿ OTP ಬಟನ್ ಮೇಲೆ ಕ್ಲಿಕ್ ಮಾಡಿ.
UIDAI ನಿಂದ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ. ಅದನ್ನು ಸಂಬಂಧಿತ ಪೆಟ್ಟಿಗೆಯಲ್ಲಿ ನಮೂದಿಸಿ ಮತ್ತು ನಂತರ ಡೌನ್‌ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ.
ಆಧಾರ್ ಡೌನ್‌ಲೋಡ್ ಮಾಡಿದ ನಂತರ, ಹೆಸರಿನ ಮೊದಲ ನಾಲ್ಕು ಅಕ್ಷರಗಳು ಮತ್ತು ಹುಟ್ಟಿದ ವರ್ಷವನ್ನು ನಮೂದಿಸುವ ಮೂಲಕ PDF ಫೈಲ್ ತೆರೆಯಿರಿ.(ಏಜೆನ್ಸೀಸ್)
IPL 2025 ವೇಳಾಪಟ್ಟಿ ಬಿಡುಗಡೆ; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೂರ್ಣ Schedule ಇಲ್ಲಿದೆ..