

IPL 2025; ಇಂಡಿಯನ್ ಪ್ರೀಮಿಯರ್ ಲೀಗ್ 2025ರ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಹೊಸ ಆಟಗಾರರಿಗೆ ಸ್ಥಾನ ಕಲ್ಪಿಸಿದೆ. ಪ್ರತಿವರ್ಷ ಕಪ್ ಗೆಲ್ಲುವ ದೃಷ್ಠಿಯಿಂದ ವಿಭಿನ್ನ ರೀತಿಯ ಸ್ಟ್ಯಾಟರ್ಜಿ ಮಾಡುತ್ತಿದೆ. ಅದೇ ತರ RCB ಪ್ರಾಂಚೈಸಿ ಈ ಬಾರಿ ಕೂಡ ಮುಂದಾಗಿದ್ದು, ಇದೀಗ, ಯುವ ಆಟಗಾರ ರಜತ್ ಪಾಟಿದಾರ್ ನಾಯಕತ್ವಕ್ಕೆ ಮಣೆ ಹಾಕಿದೆ.
ಕಳೆದ ವರ್ಷ 2024ರ ಸೀಸನ್ನಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೆರುವಂತೆ ಮಾಡಿದ್ದ RCB ತಂಡ ಇದೀಗ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿದೆ. ಇನ್ನು 2025ರ ಸೀಸನ್ನಲ್ಲಿ RCB ಪಂಸ್ಯಗಳು ಯಾರ ವಿರುದ್ಧ ಮತ್ತು ಎಲ್ಲಿಲ್ಲಿ ಪಂದ್ಯಗಳು ನಡೆಯಲಿವೆ ಎಂದು ನೋಡೋಣ..
ಇಂಡಿಯನ್ ಪ್ರೀಮಿಯರ್ ಲೀಗ್ 2025ರ(IPL2025) ವೇಳಾಪಟ್ಟಿಯನ್ನು ಇಂದು(ಫೆ.16) ಇದೀಗ ಪ್ರಕಟಿಸಿದ್ದಾರೆ. ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಇದೇ ಮಾ.22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮಧ್ಯೆ ನಡೆಯಲಿದೆ.
ಮಾ.22, KKR vs RCB, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಮಾ.28, CSK vs RCB, ಚಿದಂಬರಂ ಕ್ರೀಡಾಂಗಣ, ಚೆನ್ನೈ
ಏ.2, RCB vs GT, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏ.7, MI vs RCB, ವಾಂಖೆಡೆ ಸ್ಟೇಡಿಯಂ, ಮುಂಬೈ
ಏ.10, RCB vs DC, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏ.13, RR vs RCB, ಸವಾಯಿ ಮಾನ್ಸಿಂಗ್ ಸ್ಟೇಡಿಯಂ, ಜೈಪುರ
ಏ.18, RCB vs PBKS, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏ.20, PBKS vs RCB, ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂ, ಮುಲ್ಲನ್‌ಪುರ್
ಏ.24, RCB vs RR, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಏ.27, ಡಿಸಿ vs ಆರ್‌ಸಿಬಿ, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಮೇ.3, RCB vs CSK, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಮೇ.9, LSG vs RCB, ಏಕಾನಾ ಕ್ರಿಕೆಟ್ ಕ್ರೀಡಾಂಗಣ, ಲಕ್ನೋ
ಮೇ.13, RCB vs SRH, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಮೇ.17, RCB vs KKR, ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು(ಏಜೆನ್ಸೀಸ್)