ಯುವಕರು ನಾಚುವಂತೆ ಡ್ಯಾನ್ಸ್​ ಮಾಡಿದ ಆಸಾಮಿ; Viral Video ನೋಡಿ ವಯಸ್ಸೆಂಬುದು ನಂಬರ್​ ಅಷ್ಟೇ ಎಂದ ನೆಟ್ಟಿಗರು

Untitled design (24)
Published on

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಲದಲ್ಲಿ ಒಂದಲ್ಲಾ ಒಂದು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಜಾಲತಾಣವು ಮನರಂಜನೆಯ ಸಾಧನವಾಗಿ ಅಥವಾ ಪ್ರಪಂಚದೊಂದಿಗೆ ಸಂಪರ್ಕದಲ್ಲಿರಲು ಮಾತ್ರವಲ್ಲ ಅದು ನಮ್ಮ ಅಗತ್ಯವೂ ಆಗಿದೆ. ದಿನವಿಡೀ ಕೆಲಸದ ಒತ್ತಡ ಅಥವಾ ಕಾರ್ಯನಿರತತೆಯಿಂದ ಮುಕ್ತರಾದ ನಂತರ ಜನರು ಜಾಲತಾಣದಲ್ಲಿನ ವೈರಲ್​ ವಿಡಿಯೋಗಳನ್ನು(Viral Video) ನೋಡುತ್ತಾರೆ. ಅದು ಅವರಿಗೆ ನಿರಾಳ ಎಂಬಂತೆ ಅನುಭವವನ್ನು ನೀಡುತ್ತದೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೃದ್ಧರೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್​ ವಿಡಿಯೋದಲ್ಲಿ ವೇದಿಕೆಯ ಮೇಲೆ ಅನೇಕ ಯುವಕರು ಮತ್ತು ಹುಡುಗಿಯರು ನೃತ್ಯ ಮಾಡುವುದನ್ನು ನೋಡಬಹುದು. ಆದರೆ ಪ್ರಭುದೇವ ಅವರ ಹಾಡು ಬರುತ್ತಿದ್ದಂತೆ ವಯಸ್ಸಾದ ವ್ಯಕ್ತಿಯೊಬ್ಬರು ಬಂದು ಸೊಂಟಕ್ಕೆ ಲುಂಗಿ ಕಟ್ಟಿಕೊಂಡು ಸಂತೋಷದಿಂದ ಡ್ಯಾನ್ಸ್​ ಮಾಡುವುದನ್ನು ಕಾಣಬಹುದು. ಅವರ ನೃತ್ಯವನ್ನು ನೋಡದೇ ಇರಲು ಸಾಧ್ಯವೇ ಇಲ್ಲ.

ಈ ವಿಡಿಯೋವನ್ನು ಇದುವರೆಗೂ 32 ಮಿಲಿಯನ್​ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದಾರೆ, ವಯಸ್ಸು ನಿಜವಾಗಿಯೂ ಒಂದು ಸಂಖ್ಯೆ, ಅವರಿಂದ ಜೀವನವನ್ನು ಆನಂದಿಸುವುದು ಹೇಗೆಂದು ಕಲಿಯಬೇಕು, ಅಲ್ಲಿರುವ ಯುವಕರಿಗಿಂತ ಚೆನ್ನಾಗಿ ಡ್ಯಾನ್ಸ್​ ಮಾಡುತ್ತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net