ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸರ್ಕಾರದ ಸವಲತ್ತುಗಳನ್ನು ಜನರ ಕಾಲಬುಡಕ್ಕೆ ತಲುಪಿಸುವುದು ಜನಪ್ರತಿನಿಧಿಗಳ ಮೊದಲ ಆದ್ಯತೆಯಾಗಬೇಕು. ಪ್ರತಿ ಕೆಲಸಕ್ಕೂ ಗೌರವ, ವಾನ್ಯತೆ ಇದೆ. ಕಾರ್ಮಿಕರು ಘನತೆಯಿಂದ ಕೆಲಸ ವಾಡಬೇಕೆನ್ನುವ ನೆಲೆಯಲ್ಲಿ ಸರ್ಕಾರ ಶ್ರಮಿಕ ವರ್ಗಕ್ಕೆ ಟೂಲ್‌ಕಿಟ್ ಉಚಿತವಾಗಿ ನೀಡಿದೆ. ಅದೇ ರೀತಿ ಅರ್ಜಿ ಹಾಕಿದವರೆಲ್ಲರಿಗೂ ಶೀಘ್ರ ಹಕ್ಕುಪತ್ರಗಳನ್ನು ಒದಗಿಸಲಾಗುವುದು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಉಚ್ಚಿಲದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯಿಂದ 300 ಕಟ್ಟಡ ಕಾರ್ಮಿಕರಿಗೆ ಟೂಲ್‌ಕಿಟ್, ದೇವರಾಜು ಅರಸು ನಿಗಮದಿಂದ 33 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಕಂದಾಯ ಇಲಾಖೆಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರದ ಅರ್ಹ 54 ಫಲಾನುಭವಿಗಳಿಗೆ 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಉಳ್ಳಾಲ ತಹಸೀಲ್ದಾರ್ ಡಿ.ಎ.ಪುಟ್ಟರಾಜು, ದೇವರಾಜು ನಿಗಮದ ಅಧಿಕಾರಿ ಮಂಜುನಾಥ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಕುವಾರ್, ರಾಜ್ಯ ಹಜ್ ಸಮಿತಿ ಸದಸ್ಯ ಅಬ್ದುಲ್ ರಹಿವಾನ್ ಕೋಡಿಜಾಲ್, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಕೊಣಾಜೆ ಗ್ರಾ.ಪಂ. ವಾಜಿ ಅಧ್ಯಕ್ಷ ಶೌಕತ್ ಅಲಿ, ಸ್ಪೀಕರ್ ಖಾದರ್ ಆಪ್ತ ಸಹಾಯಕ ಮನ್ಸೂರು ಮಂಚಿಲ ಮತ್ತಿತರರಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು ಸ್ವಾಗತಿಸಿದರು.
ಹಲವು ವರ್ಷಗಳಿಂದ ತಾವು ವಾಸವಿದ್ದ ಮನೆ ಸ್ವಂತದ್ದೆಂದು ಹೇಳುವ ಅಧಿಕಾರ ಗಳಿಸದವರಿಗೆ ಇಂದು ಹಕ್ಕುಪತ್ರ ದೊರಕಿದ್ದು, ತಮ್ಮ ಮನೆ ಸ್ವಂತದೆಂದು ಹೇಳಿಕೊಳ್ಳುವ ಅಧಿಕಾರ ಸಿಕ್ಕಿದೆ. ಕೈಗೆ ಸಿಕ್ಕಿರುವ ಹಕ್ಕುಪತ್ರ ಬ್ಯಾಂಕಿನಲ್ಲಿ ಅಡವಿಟ್ಟು ದುರುಪಯೋಗಪಡಿಸಬೇಡಿ. ಭೂಮಿಯ ಬೆಲೆ ದಿನದಿಂದ ದಿನಕ್ಕೆ ದುಪ್ಪಟ್ಟುಗೊಳ್ಳುತ್ತಿದೆ. ಉಳ್ಳಾಲ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯಾಗಿರುವುದರಿಂದ ಇಲ್ಲಿ ಉದ್ಯಮಕ್ಕೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ.
ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ
https://www.vijayavani.net/strike-of-village-administrative-officers-2