

ಭೋಪಾಲ್: ಮಧ್ಯಪ್ರದೇಶದಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಿದ ರಾಣಿ ಕಮ್ಲಾಪತಿ (ಹಬೀಬ್ಗಂಜ್) ರೈಲ್ವೆ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ರೈಲ್ವೆ ನಿಲ್ದಾಣಕ್ಕೆ 18ನೇ ಶತಮಾನದ ಗೊಂಡ ಸಾಮ್ರಾಜ್ಯದ ರಾಣಿ ಕಮ್ಲಾಪತಿ ಹೆಸರನ್ನು ಮರುನಾಮಕರಣ ಮಾಡಲಾಗಿದೆ.
ಈ ನಿಲ್ದಾಣವನ್ನು ರಾಣಿ ಕಮ್ಲಾಪತಿ ಅವರ ಹೆಸರಿನೊಂದಿಗೆ ಜೋಡಿಸಿದ ಕಾರಣ ಇದರ ಐತಿಹಾಸಿಕ ಮಹತ್ವವೂ ಹೆಚ್ಚಾಗಿದೆ. ಇದು ಗೊಂಡವಾನದ ಹೆಮ್ಮೆಯಾಗಿರಲಿದೆ ಎಂದು ಮೋದಿ ಹೇಳಿದರು. ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 1.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಉದ್ಘಾಟನೆ ಬಳಿಕ ವಾಯುಪಡೆ ವಿಮಾನಗಳ ಪ್ರದರ್ಶನ ಇರಲಿದೆ. ಭಾರತೀಯ ವಾಯುಪಡೆಯ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಅವರು ಪಯಣಿಸಲಿದ್ದಾರೆ.