ಎಸ್ಸೆಸ್ಸೆಲ್ಸಿಯಲ್ಲಿ ೧೦೦ರಷ್ಟು ಅಂಕಗಳಿಸಿದವರಿಗೆ ೧ ಲಕ್ಷ ರೂ. ಬಹುಮಾನ ಘೋಷಿಸಿದ ಶಾಸಕ ಅರುಣಕುಮಾರ

10-RNR-04
Published on

ರಾಣೆಬೆನ್ನೂರ: ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ರಷ್ಟು ಅಂಕಗಳಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕವಾಗಿ ೧ ಲಕ್ಷ ರೂ. ನಗದು ಬಹುಮಾನ ನೀಡುವ ಜತೆಗೆ ಅವರ ಮುಂದಿನ ಶಿಕ್ಷಣ ವೆಚ್ಚವನ್ನು ಭರಿಸುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಘೋಷಿಸಿದರು.
ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶೋತ್ಸವ ಮಂಟಪದಲ್ಲಿ ಶುಕ್ರವಾರ ಜೆಸಿಐ ಸಂಸ್ಥೆ, ಬನಶಂಕರಿ ಶಿಕ್ಷಣ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಕಿ ಜನ ಸೇವಾ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪರೀಕ್ಷಾ ಪ್ರೇರಣಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರನ್ನೂ ಸಮಾನರಾಗಿ ನೋಡುವ ಹೊಣೆಗಾರಿಕೆ ಶಿಕ್ಷಣ ವ್ಯವಸ್ಥೆಯಲ್ಲಿದೆ. ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಏಳಿಗೆ ಸಾಽಸಬೇಕೆಂದು ಎಲ್ಲರೂ ಕೆಲಸ ಮಾಡುತ್ತಿದ್ದು, ಆ ಮೂಲಕ ವಿದ್ಯಾರ್ಥಿಗಳ ಭವಿಷಯ ಉಜ್ಜಲವಾಗಬೇಕೆಂದು ಕನಸನ್ನು ಹೊಂದಿದ್ದೇನೆ. . ಸಂಘ ಸಂಸ್ಥೆಗಳ ನೆರವಿನಿಂದ ಇಂತಹ ಕಾರ್ಯಾಗಾರ ಏರ್ಪಡಿಸಿದ್ದು, ಶಾಘ್ಲನೀಯವಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಂಡು ಐಐಎಸ್ ಹಾಗೂ ಐಪಿಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀಣರಾಗಿ ತಾಲೂಕಿಗೆ ಕೀರ್ತಿ ತರಬೇಕು ಎಂದರು.
ಕ್ಷೇತ್ರ ಶಿಕ್ಷಣಾಽಕಾರಿ ಎಂ.ಎಚ್. ಪಾಟೀಲ ಮಾತನಾಡಿ, ಪ್ರತಿ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು. ಪರೀಕ್ಷೆಗೆ ಹೆದರುವ ಅವಕಶ್ಯತೆಯಿಲ್ಲ. ಆ ಸಮಯದಲ್ಲಿ ಸಮಯದ ಪರಿಪಾಲನೆ ಅತೀ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ನಡೆದಾಗ ಮಾತ್ರ ಉತ್ತಮ ಅಂಕ ಗಳಿಸಬಹುದು. ನೂರಕ್ಕೆ ನೂರು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ನನ್ನ ಕಡೆಯಿಂದ ತಲಾ ೧೦ ಸಾವಿರ ರೂ. ಸಹಾಯಧನ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net