

ರಾಣೆಬೆನ್ನೂರು: 'ರಾಣೆಬೆನ್ನೂರು ಹುಲಿ' ಎಂದೇ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದ್ದ ಕೊಬ್ಬರಿ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಪ್ರಮುಖ ಬೀದಿಗಳಲ್ಲಿ ಮೃತ ಹೋರಿಯ ಮೆರವಣಿಗೆ ಮಾಡಲಾಗಿದ್ದು, ಬಾಲಕನೊಬ್ಬ ಹೋರಿಶವ ಹಿಡಿದು, 'ಬಿಟ್ಟ್ಹೋಗಬೇಡಾ ನನ್ನಾ...' ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ನಗರದ ಕುರಬಗೇರಿ ನಿವಾಸಿ ದೇವಮರಿಯಪ್ಪ ಗುದಿಗೇರ ಅವರು ಈ ಹೋರಿಯನ್ನ ಸಾಕಿದ್ದರು. ಅದಕ್ಕೆ "ರಾಣೆಬೆನ್ನೂರು ಹುಲಿ" ಎಂದೂ ಹೆಸರಿಟ್ಟಿದ್ದರು. ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದ ಈ ಹೋರಿ, 1 ಕೆಜಿ ಬಂಗಾರ, 2 ಕೆಜಿ ಬೆಳ್ಳಿ, 15 ಟಿವಿ ಹಾಗೂ 25 ಬೈಕ್ಗಳನ್ನು ಗೆದ್ದಿತ್ತು. ಇದನ್ನೂ ಓದಿರಿ ತಮಿಳುನಾಡಿಗೆ ಚಿನ್ನಮ್ಮ ಹೋಗುತ್ತಿದ್ದ ವೇಳೆ ಅವಘಡ, ಹೊತ್ತಿ ಉರಿದ 2 ಕಾರುಗಳು
ಸುಮಾರು 17 ವರ್ಷದಿಂದ ವಿವಿಧ ಕಡೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ರಾಣೆಬೆನ್ನೂರು ಹುಲಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಹೋರಿ ಹಬ್ಬ ಇದೆ ಅಂದ್ರೆ ಸಾಕು ರಾಣೆಬೆನ್ನೂರು ಹುಲಿಯೇ ಅಲ್ಲಿನ ಆಕರ್ಷಣೆ. ಇದನ್ನು ನೋಡಲೆಂದೇ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹೋರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುತ್ತಿದ್ದ ಈ ಹೋರಿ, ತನ್ನ ಜೀವಿತಾವಧಿಯಲ್ಲಿ 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ, 17 ಬೈಕ್, 6 ಎತ್ತಿನ ಬಂಡಿ ಹಾಗೂ ನೂರಾರು ಫ್ರಿಡ್ಜ್, ಗಾಡ್ರೆಜ್, ಸೈಕಲ್ಗಳನ್ನು ಬಹುಮಾನವಾಗಿ ಪಡೆದಿದೆ. ಇದೀಗ ಈ ಹೋರಿಯ ಅಕಾಲಿಕ ನಿಧನ ಹೊಂದಿದ್ದು, ಸುದ್ದಿ ತಿಳಿದ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ರಾಣೆಬೆನ್ನೂರಿಗೆ ದೌಡಾಯಿಸಿದರು. ಅಂತ್ಯಕ್ರಿಯೆಗೆ ತಮಿಳುನಾಡಿನಿಂದ ನೂರಾರು ಅಭಿಮಾನಿಗಳು ಆಗಮಿಸಿದ್ದಾರೆ.