

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚಿಗೆ ತಮ್ಮ ತಾಯಿ ನೀತು ಕಪೂರ್ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಕಾರ್ಯಕ್ರಮ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಅದರಲ್ಲೇನು ವಿಶೇಷ ಎಂದು ಕೇಳಬಹುದು ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಒಂದು ಅವಾಂತರವನ್ನು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದ್ದಾರೆ.
ಡಾ. ಜಯಶ್ರೀ ಶರದ್ ಅವರು ಬರೆದಿರುವ ನೂತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಖಳು ಭಾಗವಹಿಸಿದ್ದರು. ನಟ ರಣಬೀರ್ ಕಪೂರ್ ಹಾಗೂ ಅವರ ತಾಯಿ ನೀತು ಕಪೂರ್ ಸಂವಾದ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಉರ್ಫಿಯ ಈ ಹೊಸ ಅವತಾರ!
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಣಬೀರ್ ಕಪೂರ್ ಒಂದು ಕೈಯಲ್ಲಿ ಕಾಫಿ ಮಗ್ ಮತ್ತು ಮತ್ತೊಂದು ಕೈಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದರು.
ಮಾತನಾಡುವ ವೇಳೆ ರಣಬೀರ್ ತಮ್ಮ ಕೈಯಲ್ಲಿ ಕಾಫಿ ಮಗ್ ಇದೆ ಎಂಬುದನ್ನು ಮರೆತ್ತಿದ್ದರು ಮತ್ತು ಪ್ಯಾಂಟ್ ಮೇಲೆ ಚೆಲ್ಲಿಕೊಂಡಿದ್ದಾರೆ. ತಕ್ಷಣವೇ ಕುರ್ಚಿಯಿಂದ ಎದ್ದ ನಟ ತಮ್ಮಗೆ ಏನಾಗಿಲ್ಲ ಎನ್ನುವ ಹಾಗೆ ವರ್ತಿಸಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ನಟನ ಕಾಲೆಳೆದಿದ್ದು ಇಲ್ಲು ಕೂಡ ಓವರ್ ಆ್ಯಕ್ಟಿಂಗ್ ಬೇಕಾ ಎಂದು ಪ್ರಶ್ನಿಸಿದ್ದಾರೆ.