ಅಣೆದೊಡ್ಡಿ ಗ್ರಾಮದ ಕೆಲವು ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಪರದಾಡುತ್ತಿದ್ದರು. ನೀರಿನ ವಿಷಯವಾಗಿ ಮಹಿಳೆಯರ ನಡುವೆ ಜಗಳವಾಗಿದ್ದೂ ಉಂಟು. ಕಾಂಗ್ರೆಸ್ ನಾಯಕ ಇಕ್ಬಾಲ್ ಹುಸೇನ್ ಅವರು ಹಮ್ಮಿಕೊಂಡಿರುವ ಮನೆ ಮನೆಗೆ ಕಾಂಗ್ರೆಸ್ ಅಭಿಯಾನದ ಅಂಗವಾಗಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದಾಗ ಮಹಿಳೆಯರಿಂದ ವಿರೋಧ ವ್ಯಕ್ತವಾಯಿತು. ಇದನ್ನೇ ಪ್ರತಿಷ್ಟೆಯಾಗಿ ತೆಗೆದುಕೊಂಡ ಇಕ್ಬಾಲ್ ಹುಸೇನ್ ಬೋರ್‌ವೆಲ್ ಕೊರೆಸಲು ಮುಂದಾದರು. ತಜ್ಞರಿಂದ ನೀರಿರುವ ಸ್ಥಳ ಗುರುತಿಸಿದರು. ಈ ವಿಷಯ ತಿಳಿದ ಜೆಡಿಎಸ್ ಮುಖಂಡರೂ ನಾವೇನು ಕಮ್ಮಿಯಿಲ್ಲ ಎಂದು ಪಕ್ಕದಲ್ಲೇ ಮತ್ತೊಂದು ಬೋರ್‌ವೆಲ್ ಕೊರೆಸಲು ಮುಂದಾದರು. ಎರಡೂ ಪಕ್ಷದವರು ಸೋಮವಾರ ರಾತ್ರಿ ಅಕ್ಕಪಕ್ಕದಲ್ಲೇ ಬೋರ್‌ವೆಲ್ ಕೊರೆಸಿದ್ದು, ಎರಡರಲ್ಲೂ ಸಮೃದ್ಧಿಯಾಗಿ ನೀರು ಸಿಕ್ಕಿದ್ದು, ಜನತೆ ಸಂತಸಗೊಂಡಿದ್ದಾರೆ.