500 ಕೋಟಿ ಸಿನಿಮಾ ಮಾಡಿದವರಿಗೆ ಆಘಾತ ನೀಡುತ್ತಿದೆ ಕಾಂತಾರ!

Ram Gopal Verma
Published on

ಬೆಂಗಳೂರು: ಜನಸಾಮಾನ್ಯರ ಮನಸ್ಸನ್ನು ಗೆಲ್ಲುತ್ತಿರುವ ಕಾಂತಾರ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ಹೊಗಳಿದ್ದಾರೆ. 'ಈ ಚಿತ್ರ 500 ಕೋಟಿ ರೂ. ಸಿನಿಮಾ ಮಾಡುವವರಿಗೆ ಆಘಾತ ನೀಡಿದೆ' ಎಂದು ಹೇಳಿದ್ದಾರೆ.

ಕಾಂತಾರ ಅಕ್ಟೋಬರ್ 14ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಗೊಂಡಿತ್ತು. ಈ ವಾರದಲ್ಲಿ ಮಲಯಾಳಮ್​ನಲ್ಲೂ ಬಿಡುಗಡೆಗೊಳ್ಳಲಿದೆ. ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ ಕಾಂತಾರದ ಬಗ್ಗೆ ಮಾತನಾಡಿದ ನಂತರ ಈಗ ರಾಜ್​ ಗೋಪಾಲ್ ವರ್ಮಾ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ರಿಷಭ್ ಶೆಟ್ಟಿ ಈಗ ಸಿನಿಮಾ ರಂಗದಲ್ಲಿ ಗುಳಿಗ ದೈವದ ಹಾಗೆ ಆಗಿದ್ದಾರೆ. 300, 400, 500 ಕೋಟಿ ರೂ. ಸಿನಿಮಾ ಮಾಡುವವರು ವಿಲನ್​ಗಳ ಹಾಗೆ ತೋರುತ್ತಿದ್ದಾರೆ. ಅವರನ್ನು ಕಾಂತಾರದ ಕಲೆಕ್ಷನ್ ಕೊಲ್ಲುತ್ತಿದೆ' ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net