

ಕರ್ನೂಲ್: ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ನ ಅಧ್ಯಕ್ಷ ಯಾರು ಎಂದು ರಾಹುಲ್ ಗಾಂಧಿ ಪರೋಕ್ಷವಾಗಿ ಹೇಳಿದ್ದಾರೆ.
'ನಾನು ಅಧ್ಯಕ್ಷರ ಪಾತ್ರ ಏನೆಂದು ಹೇಳಲಾರೆ. ಅದನ್ನು ಖರ್ಗೆ ಅವರೇ ನಿರ್ಧರಿಸುತ್ತಾರೆ. ಮುಂದೆ ನಾನು ಏನು ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರೇ ನಿರ್ಧರಿಸಲಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ ಒಂದು ಗಂಟೆಯ ಒಳಗಾಗಿ ಫಲಿತಾಂಶ ಪ್ರಕಟವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು 7897 ಮತಗಳನ್ನು ಗಳಿಸಿದ್ದು ಶಶಿ ತರೂರ್ ಅವರು ಸುಮಾರು 1000 ಮತಗಳನ್ನು ಪಡೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷ ಎಂದು ಘೋಷಿಸಲಾಯಿತು. ನೆಹರೂ-ಗಾಂಧಿ ಕುಟುಂಬಕ್ಕೆ ಸೇರದ ನಾಯಕರೊಬ್ಬರು 21 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ.(ಏಜೆನ್ಸೀಸ್)