

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಮೂವರು ಶಂಕಿತ ಆರೋಪಿಗಳು ಎಸ್ಐಟಿ(ಸ್ಪೆಷಲ್ ಇನ್ವೆಷ್ಟಿಗೇಶನ ಟೀಂ) ಬಲೆಗೆ ಬಿದ್ದಿದ್ದಾರೆ.
ಸಿಡಿ ಪ್ರಕರಣದ ತನಿಖೆ ಕೈಗೊಂಡ ಮೊದಲ ದಿನವೇ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ವಿಜಯನಗರದಲ್ಲಿ ಒಬ್ಬ, ಚಾಮರಾಜಪೇಟೆಯಲ್ಲಿ ಮತ್ತೊಬ್ಬ ಯುವಕನನ್ನ ವಶಕ್ಕೆ ಪಡೆದಿದೆ. ಸಂಜೆಯೊಳಗೆ ಮತ್ತಿಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಸಿಐಡಿ ಕಚೇರಿಯಲ್ಲಿ ಒಬ್ಬನ ವಿಚಾರಣೆ ನಡೆಯುತ್ತಿದೆ. ಕಬ್ಬನ್ ಪಾರ್ಕ್ ಪೊಲೀಸರ ತನಿಖೆಯಲ್ಲಿ ಕೆಲ ಮಾಹಿತಿ ಸಿಕ್ಕಿತ್ತು. ಇದನ್ನಾಧರಿಸಿ ಎಸ್ಐಟಿ ತಂಡ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಈ ಪೈಕಿ ಓರ್ವ ಸಂತ್ರಸ್ತ ಯುವತಿಯ ಸಂಪರ್ಕದಲ್ಲಿದ್ದ ಎನ್ನಲಾಗಿದೆ.