

ವಿಭೂತಿಕೆರೆ ಶಿವಲಿಂಗಯ್ಯ. ರಾಮನಗರ
ತಾಲೂಕಿನ ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ನಗರಸಭೆ 2ನೇ ವಾರ್ಡ್ ವಿಜಯನಗರ ಅಭಿವೃದ್ಧಿ ಕಂಡಿದ್ದರೂ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.
ನಗರಸಭೆ ಇತರ ವಾರ್ಡ್‌ಗಳಿಗೆ ಹೋಲಿಸಿದರೆ ಈ ವಾರ್ಡ್ ವಿಶೇಷವಾಗಿದೆ. ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಂತಿದ್ದು ವಿಜಯನಗರ, ಕೊಂಕಾಣಿದೊಡ್ಡಿ, ಮಾರುತಿನಗರ, ಅಂಬೇಡ್ಕರ್ ನಗರ ವ್ಯಾಪ್ತಿ ಹೊಂದಿದೆ. ಅಕ್ಕಪಕ್ಕದಲ್ಲಿ ಜಿಲ್ಲಾ ಪಂಚಾಯಿತಿ ಭವನ, ಹತ್ತಿರದಲ್ಲೇ ಪೊಲೀಸ್ ಭವನ, ಕಂದಾಯ ಭವನ, ಜಿಲ್ಲಾಧಿಕಾರಿಗಳ ಕಚೇರಿ ಇದ್ದರೂ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಹುವಾಗಿ ಕಾಡುತ್ತಿದೆ.
ವಾರ್ಡ್‌ನಲ್ಲಿ ಸಮರ್ಪಕವಾದ ರಸ್ತೆ, ಚರಂಡಿ, ಒಳಚರಂಡಿ, ಬೀದಿ ದೀಪಗಳ ಸಮಸ್ಯೆ ಜತೆಗೆ ಉದ್ಯಾನವನ ವಾರ್ಡ್‌ನಲ್ಲಿಲ್ಲ. 10-15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ವಾರ್ಡ್‌ನ ಕೆಲವೊಂದು ಭಾಗದಲ್ಲಿ ರಸ್ತೆ ಧೂಳುಮಯವಾಗಿದ್ದು ಗುಂಡಿ ಬಿದ್ದಿದೆ. ಚರಂಡಿಗಳು ಹಳೆಯದಾಗಿದ್ದು ವೈಜ್ಞಾನಿಕವಾಗಿ ನಿರ್ಮಾಣ ಆಗಬೇಕಿದೆ. ನೂತನ ಬಡಾವಣೆಗಳ ಮಣ್ಣಿನ ರಸ್ತೆಗಳು ಡಾಂಬರೀಕರಣ ಆಗಬೇಕಿದೆ. ಪ್ರತಿದಿನ ಧೂಳಿನ ನಡುವೆಯೇ ಜನರು, ವಾಹನ ಸವಾರರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ವಿಶ್ವವಿಖ್ಯಾತ ರಣಹದ್ದು ಪಕ್ಷಿಧಾಮ, ಶೋಲೆ ಚಲನಚಿತ್ರ ಚಿತ್ರೀಕರಣವಾದ ಸ್ಥಳ, ಶ್ರೀರಾಮ ಪಾದವಿಟ್ಟ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ರಾಮದೇವರ ಬೆಟ್ಟಕ್ಕೆ ಇದೇ ವಾರ್ಡ್ ಮೂಲಕವೇ ಸಾಗಬೇಕು. ಜನಜಂಗುಳಿಯಿಂದ ಕೂಡಿರುವ ರಸ್ತೆ ಅಭಿವೃದ್ಧಿ ತೆಗೆ ರಸ್ತೆ ಪಕ್ಕದಲ್ಲಿ ಸ್ವಚ್ಛತೆ ಕಾಪಾಡಬೇಕಿದೆ.
* ಬೀದಿ ದೀಪ ವ್ಯವಸ್ಥೆ
* ವೈಜ್ಞಾನಿಕ ಚರಂಡಿ, ರಸ್ತೆ ನಿರ್ಮಾಣ
* ಒಳಚರಂಡಿ ವ್ಯವಸ್ಥೆ
* ಕುಡಿಯುವ ನೀರಿನ ಸಮಸ್ಯೆ ನಿವಾರಣೆ
* ಸ್ವಚ್ಛತೆ
ಸದಸ್ಯ: ಶಿವಸ್ವಾಮಿ, ವಾರ್ಡ್ ಸಂಖ್ಯೆ 2 - ವಿಜಯನಗರ, ಸಂಪರ್ಕ ಸಂಖ್ಯೆ: 6364212434