ರೈಲಿನಿಂದ ಬಿದ್ದ ಬ್ಯಾಗ್ ವಾರಸುದಾರರಿಗೆ ಮರಳಿಸಿದ ರೈಲ್ವೆ ಸಿಬ್ಬಂದಿ

IMG-20230822-WA0038
Published on
 ಚನ್ನಪಟ್ಟಣ: 
ರೈಲ್ವೆ ಹಳಿಯಲ್ಲಿ ತನಗೆ ಸಿಕ್ಕ ಬ್ಯಾಗ್ ವೊಂದನ್ನು ಸಂಬಂಧಿಸಿದವರಿಗೆ ತಲುಪಿಸುವ ಮೂಲಕ ರೈಲ್ವೆ ಇಲಾಖೆ ಸಿಬ್ಬಂದಿಯೊರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ರೈಲ್ವೆ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಆಕ್ಟಿಂಗ್ ಮೇಟ್(ಕೀ- ಮಾನ್) ಆಗಿ ಕೆಲಸ ನಿರ್ವಹಿಸುತ್ತಿರುವ ಸತೀಶ್ ಪ್ರಾಮಾಣಿಕತೆ ಮೆರೆದಿರುವ ಸಿಬ್ಬಂದಿ. ಮಂಗಳವಾರ ಎಂದಿನಂತೆ ಟ್ರ್ಯಾಕ್ ಚೆಕ್ ಮಾಡುವಾಗ ರೈಲ್ವೆ ಹಳಿಯ ಮೇಲೆ ಬ್ಯಾಗೊಂದು ಸಿಕ್ಕಿದೆ. ಬ್ಯಾಗ್ ನಲ್ಲಿ ದೊರೆತ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯ ನೆರವಿಂದ ಸಂಬಂಧಿಸಿದರನ್ನು ಸಂಪರ್ಕಿಸಿ ಬ್ಯಾಗ್ ನ್ನು ಹಸ್ತಾಂತರಿಸಿದ್ದಾರೆ.
ಕೋಲಾರ ಮೂಲದ ಮಹೇಶ ಎಂಬ ಯುವಕನಿಗೆ ಈ ಬ್ಯಾಗ್ ಸೇರಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಕೆಳಗೆ ಬಿದ್ದಿತ್ತು ಎನ್ನಲಾಗಿದೆ. ಈ ಬ್ಯಾಗ್ ನಲ್ಲಿ 20 ಸಾವಿರದ ಸ್ಮಾರ್ಟ್ ಫೋನ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಎಟಿಎಂ, ಪಾಸ್ ಬುಕ್, ಹೊಸ ಬಟ್ಟೆಗಳು, ಶಾಲಾ-ಕಾಲೇಜಿನ ಡಾಕ್ಯುಮೆಂಟ್ ಮತ್ತು ಹಣ ಸೇರಿದಂತೆ ಇನ್ನಿತರ ಮಹತ್ವದ ದಾಖಲೆಗಳು ಇದ್ದು, ಈ ಬ್ಯಾಗ್ ನ್ನು ಮೂಲ ವಾರಸುದಾರರಿಗೆ ತಲುಪಿಸುವ ಮೂಲಕ ಸತೀಶ್  ಪ್ರಾಮಾಣಿಕತೆ ಮೆರೆದಿದ್ದಾರೆ.
ಪರರ ಸಣ್ಣ ವಸ್ತು ಸಿಕ್ಕರೆ ಸಾಕು ಕಿಸೆಗೆ ಹಾಕಿಕೊಳ್ಳುವ ಮಂದಿಯೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಯುವಕನೊರ್ವನ ಬಹುಅಮೂಲ್ಯ ವಸ್ತುಗಳಿಂದ ಬ್ಯಾಗ್ ನ್ನು ನೀಡಿ ಪ್ರಾಮಾಣಿಕತೆ ಮೆರೆದಿರುವ ಸತೀಶ್ ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net