ಅಗ್ನಿ ಅವಘಡ 14 ಗುಡಿಸಲು ಭಸ್ಮ

Fire
Published on

ರಾಮನಗರ: ತಾಲೂಕಿನ ಕೂಟಗಲ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಗುಡಿಸಲು ಭಸ್ಮವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಕೂಟಗಲ್ ನಿಂದ ಎರೇಹಳ್ಳಿಗೆ ಹೋಗುವ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಇರುಳಿಗ ಸಮೂದಾಯಕ್ಕೆ ಸೇರಿದ ಕೆಲವು ಕುಟುಂಬಗಳು ವಾಸವಾಗಿದ್ದು, ಮಂಗಳವಾರ ಮಧ್ಯಾಹ್ನ ಒಂದು ಗುಡಿಸಿಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರಾದರೂ ಬಿಸಿಲ ಬೇಗೆ ಹೆಚ್ಚಿದ್ದ ಕಾರಣ, ಉಳಿದ ಗುಡಿಸಲಿಗೂ ಬೆಂಕಿ ಬೇಗನೇ ವ್ಯಾಪಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಡಿಎಫ್ ಓ ಮಂಜುನಾಥ್ ನೇತೃತ್ದದಲ್ಲಿ  ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆಯಾದರೂ, ಈವೇಳೆಗಾಗಲೇ 14 ಗುಡಿಸಲು ಸಂಪೂರ್ಣವಾಗಿ ಸುಟ್ಟು ಹೋಗಿ, ನಾಲ್ಕು ಗುಡಿಸಲಿಗೆ ಬೆಂಕಿ ತಗುಲದಂತೆ ರಕ್ಷಣೆ ಮಾಡಲಾಗಿದೆ.

ಈ ಘಟನೆಯಲ್ಲಿ 3 ಮೇಕೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೆ, ಒಂದು ಹಸು ಹಾಗೂ ಮಾದಮ್ಮ ಎನ್ನುವರಿಗೆ ಸುಟ್ಟ ಗಾಯಗಳಾಗಿವೆ. ಮಾದಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಬಿ.ತೇಜಸ್ವಿನಿ, ತಾಪಂ ಇಓ ಪ್ರದೀಪ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net