ಆನೆ ತುಳಿತಕ್ಕೆ ಕಾರ್ಮಿಕ ಬಲಿ ಕಂಚನಹಳ್ಳಿ ಬಳಿ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾಗ ಅವಘಡ

30 KKP 1
Published on

ಕನಕಪುರ: ತಾಲೂಕಿನ ಕಂಚನಹಳ್ಳಿ ಬಳಿ ಮಂಗಳವಾರ ಮುಂಜಾನೆ ಕಾಡಾನೆ ದಾಳಿಗೆ ರೈತ ಮೃತಪಟ್ಟಿದ್ದಾನೆ.

ಹೊಸಕಬ್ಬಾಳು ಗ್ರಾಮದ ಕಾಳಯ್ಯ (65) ಮೃತ. ಈತ ಸಾತನೂರು ಹೋಬಳಿಯ ಕಂಚನಹಳ್ಳಿಯ ಅಣ್ಣೇಗೌಡರ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ತೋಟದ ಕೆಲಸಕ್ಕೆ ಹೋಗಿದ್ದಾಗ ಒಂಟಿ ಆನೆ ದಾಳಿ ಮಾಡಿ ತುಳಿದು ಸಾಯಿಸಿದೆ. ವಿಷಯ ತಿಳಿದ ಗ್ರಾಪಂ ಸದಸ್ಯ ಕುಮಾರಸ್ವಾಮಿ ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು, ಎಸಿಎಫ್ ಗಣೇಶ, ವಲಯ ಅರಣ್ಯಾಧಿಕಾರಿಗಳಾದ ಆಶಾರೆಡ್ಡಿ, ದಾಳೇಶ್, ಡಿಆರ್‌ಎಫ್‌ಒ ರಾಜು, ಕಂದರಾಜು, ರಿಜ್ವಾನ್ ಮೃತದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ದೇವರಾಜು ಅವರು, ಮೃತ ವ್ಯಕ್ತಿಗೆ ಸರ್ಕಾರದಿಂದ ದೊರೆಯುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶಾಶ್ವತವಾಗಿ ಕಾಡಾನೆಗಳ ಹಾವಳಿ ತಡೆಯಬೇಕೆಂದರೆ ನಮಗೂ ಹಲವಾರು ಸಮಸ್ಯೆಗಳಿವೆ. ಉನ್ನತ ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net