

ಕೈಲಾಂಚ (ರಾಮನಗರ)
ಯುವಕನನ್ನು ಕೊಲೆಗೆ ಮೃತ ವ್ಯಕ್ತಿಯ ಪತ್ನಿ ದೊಡ್ಡಮ್ಮನೇ ಕಾರಣ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಮನೆಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಕೆ.ಜಿ.ಹೊಸಹಳ್ಳಿ ಅಶ್ವತ್ಥ್ (27) ಎಂಬ ಯುವಕ ಮದುವೆಯಾಗಿದ್ದರು. ಈ ಮದುವೆಗೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಮೂರು ಜನರ ಗುಂಪು ದ್ವಿಚಕ್ರ ವಾಹನದಲ್ಲಿ ಬಂದು ಅಶ್ವತ್ಥ್ ಓಡಿಸುತ್ತಿದ್ದ ಬೈಕ್ ಹಿಂಬಾಲಿಸಿ ಲಾಂಗು ಬೀಸಿ, ನೆಲಕ್ಕೆ ಬಿದ್ದ ಮೇಲೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಂಗಳವಾರ ಕೊಲೆ ಮಾಡಿದ್ದರು.
ಈ ಕೊಲೆ ಹಿಂದೆ ಮೃತ ಅಶ್ವತ್ಥ್ ಪತ್ನಿ ಸಹನಾ ಅವರ ದೊಡ್ಡಮ್ಮ ಮಹದೇವಮ್ಮ ಅವರು ಪಾತ್ರವೂ ಇದೆ ಎಂದು ಆಕ್ರೋಶಗೊಂಡ ಸ್ಥಳೀಯರು ಕೆಜಿ ಹೊಸಳ್ಳಿಯಲ್ಲಿರುವ ಮಹದೇವಮ್ಮ ಅವರ ಮನೆಗೆ ಮಂಗಳವಾರ ಮಧ್ಯರಾತ್ರಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಮನೆಯ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.