ಡಿಕೆ ಶಿವಕುಮಾರ್ ಗೆ ತಟ್ಟಿದ ಟೋಲ್ ಬಿಸಿ - ಬಿಡದಿಯಿಂದ ರಾಮನಗರಕ್ಕೆ ಬರಲು 270 ರೂ ಪಾವತಿ

2023-03-14_172527
Published on

ರಾಮನಗರ: ಬೆಂಗಳೂರು  - ಮೈಸೂರು ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಮಾಡದಂತೆ ಆಗ್ರಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ತಾವೇ ಟೋಲ್ ಪಾವತಿ ಮಾಡಿ ಸಂಚಾರ ಮಾಡಿದ್ದಾರೆ. ಅದೂ ಬಿಡದಿಯಿಂದ ರಾಮನಗರಕ್ಕೆ ಬರೋಬ್ಬರಿ 270 ರೂ.ಗಳನ್ನು ಪಾವತಿಸಿದ್ದಾರೆ.

ಈ ಮಾಹಿತಿಯನ್ನಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಡಿ.ಕೆ.ಶಿ ಬಿಡದಿಯಿಂದ ರಾಮನಗರಕ್ಕೆ ಬರಲು 135 ರೂ ಪಾವತಿ ಮಾಡಬೇಕು. ಫಾಸ್ಟ್ ಟ್ಯಾಗ್ ಸ್ಕಾನರ್ ತೊಂದರೆ ನೆಪ ಹೇಳಿ 270 ರೂ ವಸೂಲಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಿಗ್ಗೆಯಿಂದಲೇ ಪ್ರತಿಭಟನೆ: ಸರ್ವೀಸ್ ರಸ್ತೆ ನಿರ್ಮಾಣ ಮಾಡದ ಹೊರತು ಟೋಲ್ ಸಂಗ್ರಹ ಮಾಡದಂತೆ ಎಚ್ಚರಿಕೆ ನೀಡಿದ್ದ ಸ್ಥಳಿಯ ಕಾಂಗ್ರೆಸ್ ಮುಖಂಡರು ಮಂಗಳವಾರ ಬೆಳಿಗ್ಗೆಯಿಂದಲೇ ಟೋಲ್ ಸಂಗ್ರಹಕ್ಕೆ ವಿರೋಧ ಮಾಡಿ ಪ್ರತಿಭಟನೆಯನ್ನು ಮಾಡಿದರು. ಟೋಲ್ ಬೂತ್ ಗಳ ಬಳಿ ನುಗ್ಗಲು ಯತ್ನಿಸಿದ ತಡೆದ ಪೊಲೀಸರು ನಂತರ ಹಲವಾರು ಮಂದಿ ಮುಖಂಡರನ್ನು ಸಹ ಬಂಧಿಸಿದ್ದಾರೆ. 

ಇದರ ಜೊತೆಗೆ ಮೊದಲ ದಿನದ ಟೋಲ್ ಸಂಗ್ರಹಕ್ಕೆ ತಾಂತ್ರಿಕ ಅಡಚರಣೆಯೂ ಆಗಿದೆ. ಫಾಸ್ಟ್ ಟ್ಯಾಗ್ ಇಲ್ಲದ ಹಾಗೂ ಇದ್ದರೂ ಕೆಲವು ತಾಂತ್ರಿಕ ಕಾರಣದಿಂದಾಗಿ ಕೆಲಸ ಮಾಡದ ಕಾರಣ ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಸ ಸ್ಥಿತಿಯೂ ನಿರ್ಮಾಣಗೊಂಡಿತ್ತು. ಇನ್ನು ಕಣಿಮಿಕೆಯಿಂದ ಬಿಡದಿ ರಾಮನಗರ ಚನ್ನಪಟ್ಟಣಕ್ಕೆ ಬರುವ ವಾಹನ ಸವರಾರಿಂದಲೂ ನಿಡಘಟ್ಟವರೆಗಿನ ಶುಲ್ಕ 135 ರೂಗಳನ್ನೇ  ಸಂಗ್ರಹ ಮಾಡುತ್ತಿದುದ್ದಕ್ಕೂ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net