

ರಾಮನಗರ: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ರವಾನಿಸಲಾಗುತ್ತಿದ್ದು, ಸೋಮವಾರ ವಿಶೇಷ ಪೂಜೆ ನೆರವೇರಿಸುವ ಮೂಲಕ ಹಿಂದೂಪರ ಕಾರ್ಯಕರ್ತರು ಮತ್ತು ರಾಮಭಕ್ತರು ಸಂಭ್ರಮಿಸಿದರು.
ರಾಮನಗರ ಕೆಂಗಲ್ ಆಂಜುನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನೂರಾರು ಕಾರ್ಯಕರ್ತರು ಪೂಜೆ ಸಲ್ಲಿಸಿದರು. 150ಕ್ಕೂ ಹೆಚ್ಚು ರಾಮ ಭಕ್ತರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ರಾಮನಗರ ಭಕ್ತಾದಿಗಳ ವತಿಯಿಂದ ಬೆಳ್ಳಿ ಇಟ್ಟಿಗೆ ಕೊಡಲಾಗುತ್ತಿದೆ.
ಈಗಾಗಲೇ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದು ರಾಮರ ದರ್ಶನವಾಗಲಿ ಎನ್ನುವುದು ಎಲ್ಲ ಭಕ್ತರ ಆಶಯ. ಈ ಹಿಂದೆ ಕರಸೇವಕರು ರಾಮಮಂದಿರ ಆಗಬೇಕು ಅಂತ ಕೂಗು ಇತ್ತು .
ಅವತ್ತು ಲಕ್ಷಾಂತರ ಜನರು ಇಲ್ಲಿಂದ ಇಟ್ಟಿಗೆ ಹೊತ್ತಿದ್ದರು. ಆದರೆ ಈಗ ರಾಮಮಂದಿರ ಪೂರ್ಣ ಆಗುತ್ತಿದೆ.
ಆದ್ದರಿಂದ ಸಾಂಕೇತಿಕವಾಗಿ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಸಮರ್ಪಿಸಲಾಗುತ್ತಿದೆ. ನಮ್ಮ ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಪೂಜೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಕೆಎಸ್ಐಸಿ ಅಧ್ಯಕ್ಷ ಗೌತಮ್ ಗೌಡ, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಶಿವಮಾದು, ಜಿಲ್ಲಾಧ್ಯಕ್ಷ ಹುಲವಾಡಿ ದೇವರಾಜು ಮುಂತಾದವರು ಇದ್ದರು.