ಬಾಲರಾಮ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಆಚರಣೆ ಇಂದು; ಜ.22ರ ಬದಲಿಗೆ 11ರಂದು ಕಾರಣ ಏನು ಗೊತ್ತಾ? | Ram Temple Anniversary

Untitled design - 2025-01-11T173737.889
Published on

ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು 2024 ಜನವರಿ 22ರಂದು ನೆರವೇರಿಸಲಾಯಿತು. ಅಂದರೆ ಈ ಜನವರಿ 22ಕ್ಕೆ ಒಂದು ವರ್ಷ ಆಗುತ್ತದೆ. ಒಂದು ವರ್ಷದ ವಾರ್ಷಿಕೋತ್ಸವವನ್ನು 22ರಂದು ಆಚರಿಸುವ ಬದಲಿಗೆ 11 ರಂದ ಅಂದರೆ ಇಂದು(ಶನಿವಾರ) ಆಚರಿಸಲಾಗುತ್ತಿದೆ(Ram Temple Anniversary). ಇದಕ್ಕೆ ಕಾರಣ ಏನಿರಬಹುದು ಎಂದು ಆಲೋಚಿಸುತ್ತಿದ್ದೀರಾ. ಏಕೆ ಎಂಬ ಕಾರಣವನ್ನು ಇಲ್ಲಿ ತಿಳಿಸಲಾಗಿದೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವವನ್ನು ಜನವರಿ 11, 2025ರಂದು ಆಚರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದೆ.

22ರ ಬದಲು 11ರಂದು ಆಚರಿಸುತ್ತಿರುವುದು ಏಕೆ?

ಹಿಂದೂ ಕ್ಯಾಲೆಂಡರ್ ಅನ್ನು ನೋಡಿದರೆ 2024ರಲ್ಲಿ ಜನವರಿ 22 ಪೌಷ್ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನಾಂಕವಾಗಿತ್ತು. ಇದನ್ನು ಕೂರ್ಮ ದ್ವಾದಶಿ ಎಂದೂ ಕರೆಯುತ್ತಾರೆ. 2025ರಲ್ಲಿ ಈ ಕಾಕತಾಳೀಯತೆಯು ಜನವರಿ 11 ರಂದು ನಡೆಯುತ್ತಿದೆ. ಆದ್ದರಿಂದ ದಿನಾಂಕದಂದು ಹೋಗುವ ಬದಲು ಹಿಂದೂ ಕ್ಯಾಲೆಂಡರ್ ಅನ್ನು ಗಮನದಲ್ಲಿಟ್ಟುಕೊಂಡು ಜನವರಿ 11 ರಂದು ರಾಮಮಂದಿರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

2025ರಲ್ಲಿ ಪೌಷ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಜನವರಿ 10 ರಂದು ಬೆಳಗ್ಗೆ 10.19ಕ್ಕೆ ಪ್ರಾರಂಭವಾಗಿದೆ. ಮತ್ತು ಜನವರಿ 11 ರಂದು ಬೆಳಗ್ಗೆ 8:21ಕ್ಕೆ ಅದು ಕೊನೆಯಾಗುತ್ತದೆ. ಪ್ರಥಮ ವಾರ್ಷಿಕೋತ್ಸವದ ದಿನ ರಾಮಮಂದಿರದ ಅಂಗಳದಲ್ಲಿ 3  ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಜನವರಿ 11 ರಿಂದ ಪ್ರಾರಂಭವಾಗಲಿದ್ದು, ಜನವರಿ 13 ರವರೆಗೆ ನಡೆಯಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net