

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆಗೂ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ನಡುವೆ ಪೋಸ್ಟರ್ ವಾರ್(Poster War) ಆರಂಭಗೊಂಡಿದೆ. ಎಎಪಿ ಪಕ್ಷವು ಬಿಜೆಪಿಯ ಕಲ್ಕಾಜಿ ಅಭ್ಯರ್ಥಿಯ ಪೋಸ್ಟರ್ ಅನ್ನು ರಿಲೀಸ್ ಮಾಡಿದ ಕೆಲಕ್ಷಣಗಳಲ್ಲಿಯೇ ಬಿಜೆಪಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿತು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಬಿಜೆಪಿಯ ಅಭ್ಯರ್ಥಿ ರಮೇಶ್ ಬಿಧುರಿ ಅವರನ್ನು ಬಾಹುಬಲಿ 1 ಚಿತ್ರದ ಖಳನಾಯಕನಂತೆ ಬಿಂಬಿಸಿರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆ ಪೋಸ್ಟರ್ನಲ್ಲಿ ಗಾಲಿಬಾಜ್ ಪಕ್ಷ ಕಾ ಗಾಳಿಬಾಜ್ ಸಿಎಂ ಚೆಹ್ರಾ ( ಆಕ್ಷೇಪಾರ್ಹ ಭಾಷೆ ಬಳಸುವುದಕ್ಕೆ ಹೆಸರುವಾಸಿಯಾದ ಪಕ್ಷದ ಸಿಎಂ) ಮತ್ತು ಬಿಜೆಪಿ ಕಾ ಗಾಳಿಬಾಜ್ ಸಿಎಂ ಚೆಹ್ರಾ ( ಬಿಜೆಪಿಯ ನಿಂದನೀಯ ಸಿಎಂ ಮುಖ) ಎಂದು ಇರುವುದನ್ನು ನೋಡಬಹುದು.
ಇದಕ್ಕೆ ಪ್ರತಿಯಾಗಿ ಬಿಜೆಪಿಯು ಅರವಿಂದ್ ಕೇಜ್ರಿವಾಲ್ ಅವರನ್ನು ‘ಶೀಷ್ಮಹಲ್ ವಾಲೇ ಎಎಪಿ-ದಾ-ಎ-ಆಜಮ್’ ಎಂದು ಕರೆಯುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿತು.ಜತೆಗೆ ವಿಡಿಯೋವೊಂದನ್ನು ಹಂಚಿಕೊಂಡಿದೆ.
ದೆಹಲಿಯ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)