ರಾಮ ಮಂದಿರ ಟ್ರಸ್ಟ್​ಗೆ ಸಿಕ್ತು ಕಚೇರಿ: ಶ್ರೀ ರಾಮ ಜನ್ಮಭೂಮಿ ತ್ರೀರ್ಥ ಕ್ಷೇತ್ರದ ವಿಳಾಸ ಹೀಗಿದೆ...

rama mandir dec 25
Published on

ನವದೆಹಲಿ: ರಾಮ ಮಂದಿರ ಟ್ರಸ್ಟ್​ ರಚನೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ತಿಳಿಸಿದ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನವದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿ ತನ್ನ ಕಚೇರಿಯನ್ನು ಹೊಂದಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

ಈ ಟ್ರಸ್ಟ್​ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣ ಸಂಬಂಧ ವಿಚಾರಗಳನ್ನು ನಿರ್ವಹಣೆ ಮಾಡಲಿದೆ.

ಗೃಹ ಸಚಿವಾಲಯದ ಪ್ರಕಾರ ಟ್ರಸ್ಟ್​ ತನ್ನ ಕಚೇರಿಯ ವಿಳಾಸವನ್ನು ಶ್ರೀ ರಾಮ ಜನ್ಮಭೂಮಿ ತ್ರೀರ್ಥ ಕ್ಷೇತ್ರ, ಆರ್​-20, ಗ್ರೇಟರ್​ ಕೈಲಾಶ್​ ಪಾರ್ಟ್​-1, ನವದೆಹಲಿ, 110048 ಎಂದು ನೋಂದಾಯಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ ತನ್ನ ನೋಟಿಫಿಕೇಶನ್​ನಲ್ಲಿ ಸುನ್ನಿ ವಕ್ಫ್​ ಬೋರ್ಡ್​ಗೆ ಮಸೀದಿ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್​ ಆದೇಶದಂತೆ 5 ಎಕರೆ ಭೂಮಿಯನ್ನು ಹಂಚಿಕೆ ಮಾಡಿರುವುದಾಗಿ ತಿಳಿಸಿದೆ.

ಲಖನೌ ಹೆದ್ದಾರಿಯಲ್ಲಿ ಬರುವ ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಸೋಹ್ವಾಲ್ ತಾಲೂಕಿನ ಧನ್ನಿಪುರ ಗ್ರಾಮದಲ್ಲಿ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net