ಅಯೋಧ್ಯೆಯಲ್ಲಿ ಐದು ಎಕರೆ ಭೂಮಿ ಸುನ್ನಿ ವಕ್ಫ್​ ಬೋರ್ಡ್​ಗೆ ಹಂಚಿಕೆ ಮಾಡಿದ ಉತ್ತರ ಪ್ರದೇಶ ಸರ್ಕಾರ

Ayodhya 20 nov 2019
Published on

ಶ್ರೀ ರಾಮಜನ್ಮಭೂಮಿ ಬಾಬರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿ ಕಳೆದ ವರ್ಷ ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟವಾಗಿತ್ತು. ಇದರ ಪ್ರಕಾರವೇ ಕೇಂದ್ರ ಸರ್ಕಾರ ಇಂದು ಬೆಳಗ್ಗೆ ಟ್ರಸ್ಟ್ ರಚನೆಯ ವಿಚಾರವನ್ನೂ ಘೋಷಿಸಿತ್ತು. (ಏಜೆನ್ಸೀಸ್)

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನವಾಗಿದ್ದು, ಮೂರು ಜಮೀನುಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಅವುಗಳ ಪೈಕಿ ಈ ಜಮೀನನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಈ ಪ್ರದೇಶಕ್ಕೆ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಅಷ್ಟೇ ಅಲ್ಲ, ಕೋಮು ಸಾಮರಸ್ಯ, ಕಾನೂನು ಸುವ್ಯವಸ್ಥೆ ಕೂಡ ಚೆನ್ನಾಗಿದೆ. ಹೀಗಾಗಿ ಈ ಪ್ರದೇಶದ ಆಯ್ಕೆ ಆಗಿದೆ ಎಂದು ಶರ್ಮಾ ವಿವರಿಸಿದರು.

ಅಯೋಧ್ಯೆಯಲ್ಲಿ ಲಖನೌ ಹೆದ್ದಾರಿಯಲ್ಲಿ ಜಿಲ್ಲಾ ಕೇಂದ್ರದಿಂದ 18 ಕಿ.ಮೀ. ಅಂತರದಲ್ಲಿರುವ ಸೋಹ್ವಾಲ್ ತಾಲೂಕಿನ ಧನ್ನಿಪುರ ಗ್ರಾಮದಲ್ಲಿ ಈ ಜಮೀನು ಇದೆ ಎಂದು ರಾಜ್ಯ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.

ಲಖನೌ: ಸುಪ್ರೀಂ ಕೋರ್ಟ್​ ತೀರ್ಪಿನಲ್ಲಿ ನಿರ್ದೇಶಿಸಿದಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯ ಪ್ರಮುಖ ಪ್ರದೇಶದಲ್ಲಿ ಐದು ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್ ವಕ್ಫ್​ ಬೋರ್ಡ್​​ಗೆ ಬುಧವಾರ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net