ರಾಮು; ಇದು ರಾಮ್​ ಗೋಪಾಲ್​ ವರ್ಮಾ ಅವರದ್ದೇ ಬಯೋಪಿಕ್​; ನಿರ್ದೇಶಕರು ಯಾರು?

ರಗವ
Published on

ಕಾಂಟ್ರವರ್ಸಿಯಲ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸಾಕಷ್ಟು ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಇದೀಗ ಫಾರ್ ಎ ಚೇಂಜ್​ ಎಂಬಂತೆ ಸ್ವತಃ ರಾಮ್​ ಗೋಪಾಲ್​ ವರ್ಮಾ ತಮ್ಮದೆ ಬಯೋಪಿಕ್​ ತೆರೆಮೇಲೆ ತರಲು ತಯಾರಿ ನಡೆಸಿದ್ದಾರೆ. ದೊರಸಾಯಿ ತೇಜ ಈ ಬಯೋಪಿಕ್​ ನಿರ್ದೇಶನ ಮಾಡಲಿದ್ದಾರೆ.

ಹೌದು, ಈ ವಿಚಾರವನ್ನು ಅವರೇ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಆರ್​ಜಿವಿ, ಒಟ್ಟು ಮೂರು ಭಾಗಗಳಲ್ಲಿ ತಮ್ಮ ಜೀವನವನ್ನು ತೆರೆಮೇಲೆ ತರಲಿದ್ದಾರಂತೆ. ಅಂದಹಾಗೆ, ಆರ್​ಜಿವಿ ಜೀವನದ ಪ್ರಮುಖ ಘಟ್ಟಗಳನ್ನು ಮೂರು ಪಾರ್ಟ್​ ಮೂಲಕ ತೋರಿಸಲಿದ್ದು, ಒಂದೊಂದು ಭಾಗ ಎರಡು ಗಂಟೆಯದ್ದಾಗಿರಲಿದೆಯಂತೆ.

20 ವಯಸ್ಸಿನ ಆರ್​ಜಿವಿಯಾಗಿ ನವ ನಟ ನಟಿಸಲಿದ್ದಾರೆ. 2ನೇ ಭಾಗದಲ್ಲಿ ಓರ್ವ ನಟ ಪಾತ್ರ ನಿರ್ವಹಿಸಲಿದ್ದಾರೆ. ಅದೇ ರೀತಿ ಮೂರನೇ ಭಾಗದಲ್ಲಿ ನಾನೇ ಕಾಣಿಸಿಕೊಳ್ಳಲಿದ್ದೇನೆ. ಮೊದಲ ಭಾಗ ರಾಮು, ಎರಡನೇ ಭಾಗ ರಾಮ್​ ಗೋಪಾಲ್​ ವರ್ಮಾ ಮತ್ತು ಮೂರನೇ ಭಾಗವಾಗಿ ಆರ್​ಜಿವಿ ಎಂಬ ಶೀರ್ಷಿಕೆ ಇರಲಿದೆ’ ಎಂದಿದ್ದಾರೆ.

ಎರಡನೇ ಭಾಗದಲ್ಲಿ ಮುಂಬೈ ಜೀವನ, ಗ್ಯಾಂಗಸ್ಟರ್​ಗಳ ಜತೆ ಒಡನಾಟ, ಹುಡುಗಿಯರ ಸಾಂಗತ್ಯ ಮತ್ತು ಅಮಿತಾಬ್​ ಬಚ್ಚನ್​ ಅವರೊಟ್ಟಿಗಿನ ಕಥೆ ಸಿನಿಮಾದಲ್ಲಿರಲಿದೆಯಂತೆ. ಮೂರನೇ ಭಾಗದಲ್ಲಿ ಸೋಲು, ಸೆಕ್ಸ್ ಮತ್ತು ಸಮಾಜದ ಬಗ್ಗೆ ಜಾಣ ಮೂರ್ಖನ ಕಲ್ಪನೆಗಳನ್ನು ಬಿತ್ತಲಿದ್ದಾರಂತೆ.

ಹಾಗಾದರೆ, ನಿರ್ದೇಶಕರು ಯಾರು, ಕಲಾವಿದರು ಯಾರೆಲ್ಲ ಇರಲಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ ಆರ್​ಜಿವಿ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net