

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ವಿಡಿಯೋವೊಂದು ಹರಿದಾಡಿತ್ತು. ಲಾಕ್ಡೌನ್ ಸಡಿಲ ಆಗಿದ್ದೇ ತಡ ರಾಕುಲ್ ಪ್ರೀತ್, ವೈನ್ ಶಾಪ್ಗೆ ಹೋಗಿ ಆಲ್ಕೋಹಾಲ್ ಖರೀದಿಸಿದ್ದಾರೆ ಎಂಬೆಲ್ಲ ವದಂತಿಗಳು ಹಬ್ಬಿದ್ದವು. ಇದೀಗ ಹರಿದಾಡಿದ ಆ ವದಂತಿಗಳಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ.
ಹೌದು, ಮೊದ ಮೊದಲು ವೈನ್ಶಾಪ್ನಿಂದ ಆಲ್ಕೋಹಾಲ್ ತರುತ್ತಿದ್ದಾರೆಯೇ ಎಂಬ ಸುದ್ದಿ ಸದ್ದು ಮಾಡುತ್ತಿದ್ದಂತೆ, ಅದಾದ ಬಳಿಕ ಅದು ಮೆಡಿಕಲ್ ಶಾಪ್ ಎಂದು ಕೆಲವರು ಕಮೆಂಟ್ ಮಾಡಿದ್ದರು. ಕೊನೆಗೆ ಆ ವಿಡಿಯೋ ರಾಕುಲ್ ಅವರನ್ನೂ ತಲುಪಿತು. ಅದನ್ನು ನೋಡುತ್ತಲೇ ಖಡಕ್ ಆಗಿಯೇ ಉತ್ತರಿಸಿದ್ದಾರೆ ರಾಕುಲ್.
‘ಛೇ ನನಗೆ ಗೊತ್ತೇ ಇರಲಿಲ್ಲ, ಮೆಡಿಕಲ್ ಶಾಪ್ನಲ್ಲಿ ಆಲ್ಕೋಹಾಲ್ ಮಾರಾಟ ಮಾಡುತ್ತಾರೆಂದು!’ ಎಂದು ಇಲ್ಲ ಸಲ್ಲದ ಕಮೆಂಟ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ. ರಾಕುಲ್ ಈ ರೀತಿ ಉತ್ತರ ಕೊಡುತ್ತಿದ್ದಂತೆ, ಆ ವಿಡಿಯೋ ಪೋಸ್ಟ್ ಮಾಡಿದವನಿಗೆ ಒಂದಷ್ಟು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ರಾಕುಲ್ ಆಲ್ಕೋಹಾಲ್ ಖರೀದಿಸಲಿ ನಿನಗೇನು ನಷ್ಟ? ನೀನೇನಾದರೂ ಅದರ ಮೊತ್ತವನ್ನು ನೀಡುತ್ತೀಯಾ? ಎಂದು ಪ್ರಶ್ನೆ ಎಸೆದಿದ್ದಾರೆ.
ಸದ್ಯ ತೆಲುಗು, ತಮಿಳಿನ ಹಲವು ಪ್ರಾಜೆಕ್ಟ್ಗಳಲ್ಲಿ ರಾಕುಲ್ ತೊಡಗಿಸಿಕೊಂಡಿದ್ದು, ಬಾಲಿವುಡ್ ಸಿನಿಮಾಗಳೂ ಅವರ ಬತ್ತಳಿಕೆಯಲ್ಲಿವೆ. ಲಾಕ್ಡೌನ್ ನಡುವೆ ಕುಟುಂಬದೊಟ್ಟಿಗೆ ಸೇರಿ ಗುರ್ಗಾಂವ್ ಸುತ್ತಮುತ್ತಲಿನ ಕೊಳಗೇರಿ ಪ್ರದೇಶಗಳಲ್ಲಿನ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು ರಾಕುಲ್. (ಏಜೆನ್ಸೀಸ್)