ಸತೀಶ್ ನೀನಾಸಂಗೆ ಏನಾಯ್ತು? ಮುಖ ಮುಚ್ಕೊಂಡು ವಿದೇಶಿಗರ ಜತೆ ಕುಂತವ್ರೇ..

ninasam
Published on

ಸತೀಶ್​ ನೀನಾಸಂ ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಮನೆಯ ದಿಗ್ಬಂಧನದಲ್ಲಿ ಸಿನಿಮಾ, ಸ್ಕ್ರಿಪ್ಟು, ವ್ಯಾಯಾಮ ಮತ್ತು ಓದಿನಲ್ಲಿ ತಲ್ಲೀನರಾಗಿದ್ದಾರೆ. ಇದೆಲ್ಲದರ ನಡುವೆಯೂ, ಸತೀಶ್ ಗಮನ ಮಾತ್ರ ವಿದೇಶದಲ್ಲಿದೆ. ಅಂದರೆ, ಅವರೇ ಅಂಥದ್ದೊಂದು ಫೋಟೋ ಹಂಚಿಕೊಂಡಿದ್ದಾರೆ. ವಿದೇಶಿಗರೊಂದಿಗೆ ಕುಳಿತು ‘ಗೋ ಕರೊನಾ ಗೋ’ ಎಂದು ಜಪ ಮಾಡುತ್ತಿದ್ದಾರೆ.

ಈ ಹಿಂದೆ ‘ವೈತರಣಿ’ ಸಿನಿಮಾ ಶೂಟಿಂಗ್​ ಸಮಯದಲ್ಲಿ ಲಂಡನ್​ನಲ್ಲಿ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡ ಸತೀಶ್​, ಸದ್ಯದ ಲಾಕ್​ಡೌನ್​ ಸ್ಥಿತಿ ಹೇಗಿದೆ ಎಂಬುದಕ್ಕೆ ಅವರದೇ ಆದ ವ್ಯಾಖ್ಯಾನ ನೀಡಿದ್ದಾರೆ. ಕರೊನಾ ನಮ್ಮ ಜತೆ ಕಣ್ಣಾಮುಚ್ಚೆ ಕಾಡೆಗೂಡೆ ಆಡುತ್ತಿದೆ. ಹಾಗಾಗಿ ಮನೆಯಲ್ಲೇ ಇರಿ, ಸೇಫಾಗಿರಿ ಎಂದಿದ್ದಾರೆ.

ಈ ಮೊದಲು ಲಾಕ್​ಡೌನ್​ ಕೊಂಚ ಸಡಿಲಿಕೆ ಆದಾಗ, ಖುಷಿಯ ಮೂಡ್​ನಲ್ಲಿದ್ದ ಫೋಟೋ ಪೋಸ್ಟ್​ ಮಾಡಿ, ಲಾಕ್​ಡೌನ್​ ಸ್ವಲ್ಪ ಸಡಿಲಿಕೆ. ಆದರೂ ನಮ್ಮ ಎಚ್ಚರ ನಮಗಿರಲಿ ಎಂಬ ಕ್ಯಾಪ್ಷನ್​ ನೀಡಿದ್ದರು. ಒಟ್ಟಿನಲ್ಲಿ ಲಾಕ್​ಡೌನ್​ನಲ್ಲಿ ಒಂದಷ್ಟು ಬದಲಾವಣೆಗೆ ಸತೀಶ್​ ಒಗ್ಗಿಕೊಂಡಿದ್ದಾರೆ. ಸದ್ಯ ಗೋದ್ರಾ ಸಿನಿಮಾ ಬಿಡುಗಡೆಗೆ ಸಿದ್ಧವಾದರೆ, ವೈತರಣಿ ಚಿತ್ರದ ಕೆಲಸಗಳು ಬಾಕಿ ಉಳಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net