‘ಭಾರತದ ಕೋಗಿಲೆ’ಯಾಗಿ ‘ರಾಮಾಯಣ’ದ ಸೀತೆ!

Deepika Final New
Published on

ನಿಜ ಹೇಳಬೇಕೆಂದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ‘ರಾಮಾಯಣ’ ಖ್ಯಾತಿಯ ದೀಪಿಕಾ ಚಿಖ್ಲಿಯಾ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಯಾವಾಗ ಲಾಕ್‌ಡೌನ್ ಘೋಷಣೆಯಾಗಿ, ‘ರಾಮಾಯಣ’ ಮರುಪ್ರಸಾರವಾಯಿತೋ, ಅಲ್ಲಿಂದ ಸತತವಾಗಿ ಸುದ್ದಿ ಮಾಡುತ್ತಲೇ ಇದ್ದಾರೆ ದೀಪಿಕಾ.

ಎಲ್ಲಾ ಸರಿ, ಈ ಬಾರಿಯ ವಿಶೇಷವೇನು ಎಂಬ ಪ್ರಶ್ನೆ ಬರುವುದು ಸಹಜ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ‘ಭಾರತದ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಸರೋಜಿನಿ ನಾಯ್ಡು ಅವರ ಬಯೋಪಿಕ್ ನಿರ್ಮಾಣವಾಗುತ್ತಿದೆ. ಹೆಸರು ‘ಸರೋಜಿನಿ’. ವಿಶೇಷವೆಂದರೆ, ದೀಪಿಕಾ ಈ ಚಿತ್ರದಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರವನ್ನು ನಿರ್ವಹಿಸುತ್ತಿಸುತ್ತಿದ್ದಾರೆ.

ಈ ಕುರಿತು ಅವರೇ ಟ್ವೀಟ್ ಮಾಡಿದ್ದು, ಚಿತ್ರದ ಮೊದಲ ಲುಕ್ ಪೋಸ್ಟರ್‌ವೊಂದನ್ನು ಅವರು ತಮ್ಮ ಟ್ವಿಟರ್ ಅಕೌಂಟ್ ಮೂಲಕ ಬಿಡುಗಡೆ ಮಾಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಚಿತ್ರದ ಬಗ್ಗೆ ಹೆಚ್ಚೇನೂ ಹೇಳಿಕೊಂಡಿಲ್ಲ ದೀಪಿಕಾ. ಇದರಲ್ಲಿ ಯಾರೆಲ್ಲಾ ಇರುತ್ತಾರೆ, ಯಾವಾಗ ಬಿಡುಗಡೆ ಎಂಬ ಯಾವ ವಿಷಯವನ್ನೂ ಅವರು ಬಿಟ್ಟುಕೊಟ್ಟಿಲ್ಲ.

‘ಸರೋಜಿನಿ’ ಚಿತ್ರವನ್ನು ಕಾನು ಭಾಯ್ ಪಟೇಲ್ ನಿರ್ಮಾಣ ಮಾಡಿದರೆ, ಆಕಾಶ್ ನಾಯಕ್ ಮತ್ತು ಧೀರಜ್ ಮಿಶ್ರಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಧೀರಜ್ ಮಿಶ್ರಾ ಮತ್ತು ಯಶೋಮತಿ ದೇವಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net