

Kapil Sibal: ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ತೆಗೆದುಹಾಕುವ ಮಸೂದೆಗಳ ಮಂಡನೆಯ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಗುರುವಾರ(ಆಗಸ್ಟ್ 21) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, ಈ ಶಾಸನಗಳು ಸಂವಿಧಾನಕ್ಕೆ ಗೆದ್ದಲು ಹುಳುಗಳ ರೀತಿ ಕಾರ್ಯ ನಿರ್ವಹಿಸುವಂತಹ ಕಾನೂನುಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು. ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಮತ್ತು ಸಚಿವರು ಗುರಿಯಾಗಿಸುವುದು ಈ ಮಸೂದೆಗಳ ಉದ್ದೇಶವಾಗಿದ್ದು, ಈ ತಂತ್ರಗಳ ಮೂಲಕ ಸರ್ಕಾರ ಸಂವಿಧಾನದ ಮೂಲಭೂತ ನೆಲೆಯನ್ನೇ ನಾಶಪಡಿಸುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಡಿಸಿ ಕಚೇರಿ ಮುಂದೆ ರಸ್ತೆ ತಡೆ ಚಳವಳಿ
ಸಂವಿಧಾನ ತಿದ್ದುಪಡಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುವುದರಿಂದ ಸರ್ಕಾರಕ್ಕೆ ಮಸೂದೆಗಳನ್ನು ಅಂಗೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಸಂವಿಧಾನವು ನಮಗೆ ನೀಡಿರುವ ಮಾನವ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನುಗಳನ್ನು ನಾವು ನೋಡಿದ್ದೇವೆ ಎಂದರು.
ಇದನ್ನೂ ಓದಿ:ಮೇಲ್ಗಂಗೊಳ್ಳಿಯಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ
ಬಿಜೆಪಿ ಮತಕಳ್ಳತನ ಮಾಡುವ ಮೂಲಕ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ, ಅದನ್ನು ಮೀರಿ ವಿಪಕ್ಷವೊಂದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೂಲಕ ಅಧಿಕಾರಕ್ಕೆ ಬಂದರೆ, ಅಂತಹ ಸರ್ಕಾರವನ್ನು ಈ ರೀತಿಯಾಗಿ ನಾಶಮಾಡುತ್ತಾರೆ ಎಂದರು.(ಏಜೆನ್ಸೀಸ್)