

ವಾರಣಾಸಿ: ಭಾರತ ಮಾಜಿ ಹಾಕಿ ಆಟಗಾರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ
ಮಿಲ್ಟನ್ ಕೇನ್ಸ್ನಲ್ಲಿ ನಡೆದ 1997 ರ ಜೂನಿಯರ್ ಹಾಕಿ ವಿಶ್ವಕಪ್ನ ಪ್ರಮುಖ ಸ್ಟ್ರೈಕರ್ ಆಗಿದ್ದ ರಾಜೀವ್ ಮಿಶ್ರಾ(46) ವಾರಣಾಸಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಶುಕ್ರವಾರ ಮುಂಜಾನೆ ಸ್ವ ಗೃಹದಲ್ಲಿ ಮೃತದೇಹ ಪತ್ತೆಯಾಗಿದೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಿಶ್ರಾ ಕೆಲವು ದಿನಗಳ ಹಿಂದೆ ಮೃತಪಟ್ಟಿಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಿಂದ ದುರ್ವಾಸನೆ ಬಂದ ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಒಂಟಿ ಮಹಿಳೆಯರಿಗೆ ಮಾದಕ ವಸ್ತು ನೀಡಿ ದರೋಡೆ; ಮೋಸ್ಟ್ ವಾಂಟೆಡ್ ಯುವತಿ ಸುಳಿವು ನೀಡಿದ್ರೆ 10 ಸಾವಿರ ರೂ.!
ಭಾರತದ ಮಾಜಿ ನಾಯಕ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟರ್ಕಿ ಇವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಮಿಶ್ರಾರೊಂದಿಗೆ ಹಾಕಿಯನ್ನು ಆಡಿದ್ದಾರೆ. 1997ರಲ್ಲಿ ಇಂಗ್ಲೆಂಡ್ನ ಮಿಲ್ಟನ್ನಲ್ಲಿ ನಡೆದ ಜೂನಿಯರ್ ಹಾಕಿ ವಿಶ್ವಕಪ್ನಲ್ಲಿ ಅಗ್ರ ಗೋಲ್ ಸ್ಕೋರರ್ಗಳಲ್ಲಿ ಒಬ್ಬರಾಗಿದ್ದ ಮಿಶ್ರಾ ಒಂಬತ್ತು ಗೋಲುಗಳನ್ನು ಹೊಡೆದಿದ್ದರು.
ಅಲ್ಲದೇ, ಇದೇ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ಮಿಶ್ರಾರನ್ನು, '1998ರ ವರ್ಷದ ಸ್ಪೋರ್ಟ್ಸ್ಟಾರ್ ಯುವ ಪ್ರತಿಭೆ' ಎಂದು ಆಯ್ಕೆ ಮಾಡಲಾಗಿತ್ತು.(ಏಜೆನ್ಸೀಸ್)