ರಜನಿಕಾಂತ್​​ ಫ್ಯಾನ್ಸ್​ಗೆ ಡಬಲ್​ ಧಮಾಕಾ : ವೆಟ್ಟೈಯಾನ್ ಬಿಡುಗಡೆ ಜತೆಗೆ ಮುಂದಿನ ಪ್ರಾಜೆಕ್ಟ್​​​ ಸುಳಿವು ಕೊಟ್ರು ಸೂಪರ್​ಸ್ಟಾರ್​

Untitled-design-4-1
Published on

ಚೆನ್ನೈ: ಸೂಪರ್​ಸ್ಟಾರ್ ರಜನಿಕಾಂತ್​​​ ಯುವ ನಿರ್ದೇಶಕರ ಜತೆ ಒಂದರ ಹಿಂದೆ ಒಂದರಂತೆ ಅತ್ಯುತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್ ನಟಿಸಿದ್ದ ಜೈಲರ್ ಸಿನಿಮಾ ಮಾಸ್​ ಹಿಟ್ಟ ಆಗಿತ್ತು. ಜೈಲರ್ ಚಿತ್ರದ ಯಶಸ್ಸಿನ ನಂತರ ತಲೈವ ಲೈಕಾ ನಿರ್ಮಾಣದ ಎರಡು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲರ್​ ಸಿನಿಮಾದ ಬಳಿಕ ರಜನಿಕಾಂತ್​ ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್​​ ನಿರ್ದೇಶಿಸಿದ್ದ ಲಾಲ್​ ಸಲಾಮ್​​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಟಿ.ಜೆ.ಜ್ಞಾನವೇಲ್ ನಿರ್ದೇಶನದ "ವೆಟ್ಟೈಯಾನ್" ಚಿತ್ರದ ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಪ್ರಸ್ತುತ ಆಧ್ಯಾತ್ಮಿಕ ಪ್ರವಾಸದಲ್ಲಿರುವ ರಜನಿಕಾಂತ್​ ಅವರು ಹಿಮಾಲಯದಲ್ಲಿದ್ದಾರೆ. ಹಿಮಾಲಯದಲ್ಲಿನ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸದ್ಯ ಸೂಪರ್​ಸ್ಟಾರ್​ ರಜನಿಕಾಂತ್​​ ವೆಟ್ಟೈಯಾನ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನನ್ನ ಪಾತ್ರದ ಚಿತ್ರೀಕರಣ ಮುಗಿದಿದೆ. ಉಳಿದ ಪಾತ್ರಗಳ ಚಿತ್ರೀಕರಣ ನಡೆಯುತ್ತಿದೆ. ವೆಟ್ಟೈಯಾನ್ ಚಿತ್ರ ಅಕ್ಟೋಬರ್ 10ರಂದು ದಸರಾ ಸಮಯದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಬೆಸಿಲ್, ರಾಣಾ, ಮಂಜು ವಾರಿಯರ್, ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಜನಿಕಾಂತ್​ ಅವರು ಲೋಕೇಶ್​ ಕನಕರಾಜ್​ ನಿರ್ದೇಶನದ "ಕೂಲಿ" ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗು ಗೋತ್ತೆ ಇದೆ. ಕೂಲಿ ಸಿನಿಮಾ ಬಗ್ಗೆ ಮಾತನಾಡಿರುವ ರಜನಿಕಾಂತ್​​, "ನನ್ನ ಮುಂದಿನ ಹೊಸ ಪ್ರಾಜೆಕ್ಟ್,​ ಕೂಲಿ ಸಿನಿಮಾದ ಶೂಟಿಂಗ್​ ಜೂನ್​ 10ರಿಂದ ಪ್ರಾರಂಭವಾಗಲಿದೆ" ಎಂದು ತಿಳಿಸಿದ್ದಾರೆ. ರಜನಿಕಾಂತ್ ಮುಂದಿನ ವಾರದೊಳಗೆ ಚೆನ್ನೈಗೆ ಮರಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net