ನವದೆಹಲಿ : ಲೋಕಸಭೆ ಚುನಾವಣೆ ಮತದಾನ ಮುಗಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶಾದ್ಯಂತ 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದರು. 150 ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರುಲು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಆರೋಪವನ್ನು ತಿರಸ್ಕರಿಸಿದ್ದಾರೆ.
ಇದನ್ನು ಓದಿ : ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ: ಕಾಂಗ್ರೆಸ್ ನಾಯಕಿ ಹೇಳಿದ್ದೇನು
“ಯಾರಾದರೂ ಅವರ (ಜಿಲ್ಲಾ ಮ್ಯಾಜಿಸ್ಟ್ರೇಟ್/ರಿಟರ್ನಿಂಗ್ ಅಧಿಕಾರಿಗಳು) ಮೇಲೆ ಪ್ರಭಾವ ಬೀರಬಹುದೇ? ಇದನ್ನು ಯಾರು ಮಾಡಿದ್ದಾರೆ ಎಂದು ನಮಗೆ ತಿಳಿಸಿ. ಅದನ್ನು ಮಾಡಿದ ವ್ಯಕ್ತಿಯನ್ನು ನಾವು ಶಿಕ್ಷಿಸುತ್ತೇವೆ. ಅದನ್ನು ಹೊರತುಪಡಿಸಿ ನೀವು ವದಂತಿ ಹರಡಿ ಎಲ್ಲರನ್ನೂ ಅನುಮಾನಿಸುವುದು ಸರಿಯಲ್ಲ” ಎಂದು ರಾಜೀವ್ ಕುಮಾರ್ ಹೇಳಿದರು .
ಈ ಹಿಂದೆ, ಭಾರತೀಯ ಚುನಾವಣಾ ಆಯೋಗವು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ, ನಿಗದಿತ ಮತಗಳ ಎಣಿಕೆಗೆ (ಜೂನ್) ಕೆಲವೇ ದಿನಗಳ ಮೊದಲು ಅಮಿತ್ ಶಾ ಅವರು 150 ಡಿಎಂಗಳಿಗೆ ಕರೆ ಮಾಡಿದ್ದಾರೆ ಎಂಬ ಜೈರಾಮ್ ರಮೇಶ್ ಅವರ ಸಾರ್ವಜನಿಕ ಹೇಳಿಕೆಗೆ ವಾಸ್ತವಿಕ ಮಾಹಿತಿ ಮತ್ತು ವಿವರಗಳನ್ನು ಕೇಳಿತ್ತು. ಮತಗಳ ಎಣಿಕೆ ಆರಂಭಿಸುವ ಮುನ್ನ ಸಲ್ಲಿಸುವಂತೆ ಸೂಚಿಸಿತ್ತು.(ಏಜೆನ್ಸೀಸ್)
ಕಬ್ಬಿನ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದ ಅಥವಾ ಕೆಟ್ಟದಾ? : ಐಸಿಎಂಆರ್ ಕೊಟ್ಟಿದೆ ಉತ್ತರ