ಪಕ್ಕದ್ಮನೆ ಯುವಕನ ಜತೆ ವಿವಾಹಿತ ಮಹಿಳೆ ಎಸ್ಕೇಪ್​! 10 ದಿನದ ಬಳಿಕ ಎರಡೂ ಕುಟುಂಬಕ್ಕೆ ಕಾದಿತ್ತು ಶಾಕ್​

Couple Death
Published on

ಜೈಪುರ: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧ ಬೆಳೆಸುವ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕೊಳ್ಳಿ ಇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪತಿ ಮತ್ತು ಪತ್ನಿಯ ನಡುವಿನ ಸಣ್ಣ ಸಣ್ಣ ಜಗಳಗಳು ಹಾಗೂ ಅನುಮಾನಗಳು ಮತ್ತು ಮನಸ್ತಾಪಗಳಿಂದಾಗಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತಿವೆ. ಇವುಗಳು ಸಾಮಾನ್ಯ ಅಂತಾ ಭಾವಿಸಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಡೆಯದೇ ಬೇರೆ ದಾರಿ ಹಿಡಿಯುತ್ತಿರುವುದು ಸಾಮಾನ್ಯವಾಗಿವೆ. ಇಂಥಹ ಅಕ್ರಮ ಸಂಬಂಧಗಳ ಅಂತ್ಯವು ಕೂಡ ದುರಂತವಾಗಿರುತ್ತದೆ ಎಂಬುದೇ ಸತ್ಯ ಸಂಗತಿ. ಇದಕ್ಕೆ ತಾಜಾ ಉದಾಹರಣೆಯಾಗಿ ರಾಜಸ್ಥಾನದಲ್ಲಿ ಒಂದು ಘಟನೆ ನಡೆದಿದೆ.

ಇತ್ತೀಚೆಗೆ ರಾಜಸ್ಥಾನದ ಬರ್ಮರ್​ ಜಿಲ್ಲೆಯ ಸಿಂಧಾರಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮೋತಿಸಾರ ಗ್ರಾಮದ ಮನೆಯೊಂದರ ನೀರಿನ ಟ್ಯಾಂಕ್​ನಲ್ಲಿ ಮಹಿಳೆ ಮತ್ತು ಯುವಕನ ಶವ ಪತ್ತೆಯಾಗಿತ್ತು. ಮೃತರನ್ನು ಸಿಂಧಾರಿ ಗ್ರಾಮದ ಚನ್ನಾನಿ ಮತ್ತು ಜೊಗರಾಮ್​ ಎಂದು ಗುರುತಿಸಲಾಯಿತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಪೊಲೀಸರು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಇದೀಗ ಬಂಧಿರುವ ಮಾಹಿತಿ ಪ್ರಕಾರ ವಿವಾಹಿತ ಮಹಿಳೆ ಚನ್ನಾನಿ ಮತ್ತು ಯುವಕ ಜೊಗರಾಮ್​ ನಡುವೆ ವಿವಾಹೇತರ ಸಂಬಂಧ ಇತ್ತು ಎಂದು ಹೇಳಲಾಗಿದೆ. ಚನ್ನಾನಿ ನೆರೆ ಮನೆಯವನಾದ ಜೊಗರಾಮ್​ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರು ನಡುವೆ ಪ್ರೀತಿ ಶುರವಾಗಿತ್ತು. ಇಬ್ಬರ ಪ್ರೀತಿ ಗಾಢವಾಗುತ್ತಾ ದೈಹಿಕ ಸಂಬಂಧವು ಬೆಳೆದಿತ್ತು. ಯಾರು ಇಲ್ಲದ ಸಮಯದಲ್ಲಿ ಇಬ್ಬರು ಸೇರುತ್ತಿದ್ದರು. ಹೀಗೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸಂಬಂಧ ಗಟ್ಟಿಯಾದ ಇಬ್ಬರು ನ.13ರಂದು ಮನೆಯಿಂದ ನಾಪತ್ತೆಯಾಗಿದ್ದರು.

ಮೃತ ಮಹಿಳೆ 6 ತಿಂಗಳ ಹಿಂದಷ್ಟೇ ವಿಷ್ಣರಾಮ್​ ಎಂಬಾತನೊಂದಿಗೆ ವಿವಾಹವಾಗಿದ್ದಳು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುವಾಗ 10 ದಿನಗಳ ಬಳಿಕ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರನ್ನು ಆಘಾತಕ್ಕೆ ದೂಡಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಓಡಿ ಹೋದವರು ಇದೀಗ ಶವವಾಗಿ ಪತ್ತೆಯಾಗಿರುವುದು ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಅನುಮಾನ ಹುಟ್ಟುಹಾಕಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net