

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಸದ್ಯ ಭಾರೀ ಕುತೂಹಲವನ್ನು ಹುಟ್ಟುಹಾಕಿರುವ ನಟ, ನಿರ್ದೇಶಕ, ಬರಹಗಾರ ರಾಜ್ ಬಿ.ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಟೋಬಿ' ಚಿತ್ರದ ಟ್ರೇಲರ್ ಇದೀಗ ಯಶಸ್ವಿಯಾಗಿ ಬಿಡುಗಡೆಗೊಂಡಿದ್ದು, ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ರಾಜ್, ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ ರಾಜ್ ಬಿ.ಶೆಟ್ಟಿ, "ನಾನು ಗುಂಡಿಯಲ್ಲಿದ್ದೆ, ಗುಂಡಿಯಲ್ಲಿ ರೆಸ್ಟ್ ತೆಗೆದುಕೊಂಡಿರುವ ಜೀವಕ್ಕೆ ಮೇಲೆ ಬರುವ ಸಾಮರ್ಥ್ಯ ಮತ್ತು ಶಕ್ತಿ ಇರುವುದು. ಹಾಗಾಗಿ ಗುಂಡಿಯಲ್ಲಿರುವಾಗ ನನ್ನ ಸುತ್ತವಿದ್ದ ತಂಡ ಯಾವಾಗಲೂ ಒಂದು ಮಾತು ಹೇಳುತ್ತಿತ್ತು. ಇಲ್ಲ ಏನಾದರೂ ಮಾಡೋಣ ಎಂದು. ನಾನು ಅದಕ್ಕೆ ಇಲ್ಲ! ಸೋತಾಗ ಸೋಲನ್ನು ಒಪ್ಪಿಕೊಳ್ಳಬೇಕು. ಆದ್ರೆ, ಸಾವು ಒಪ್ಪಿಕೊಳ್ಳಲ್ಲ. ರೆಸ್ಪಾನ್ಸ್ ಮಾತು, ಪದಗಳು ಸಾಯುತ್ತದೆ. ಆದರೆ ಸಿನಿಮಾ ಸಾಯುವುದಿಲ್ಲ ಎಂದು ಹೇಳಿದೆ" ಎಂದರು.
"ಹಾಗಾಗಿ ಯಾರು ಏನೇ ಮಾಡಲಿ. ಈಗ ಅವರ ಹೆಸರು ಬೇಡ, ಹೆಸರೇಳುವಷ್ಟು ದೊಡ್ಡವರಲ್ಲ, ನಿಮಾ ದೊಡ್ಡದಾಗಿದೆ ಅದಕ್ಕೋಸ್ಕರ. ಅವರಿಗೆ ಉತ್ತರವಾಗಿ ಈ ಟೋಬಿ! ಮಾರಿ ಮಾರಿ ಮಾರಿಗೆ ದಾರಿ. ಅಂದ್ರೆ, ಕುರಿಯನ್ನು ಕೆಣಕಲು ಹೋಗದಿರಿ ಎಂದರ್ಥ" ಎಂದು ರಾಜ್ ಬಿ.ಶೆಟ್ಟಿ ಹೇಳಿದರು. ಈ ವೇಳೆ ವೇದಿಕೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಕೂಡ ಉಪಸ್ಥಿತರಿದ್ದರು.