ಐಟಂ ಸಾಂಗ್​ಗೆ ಟಾಪ್​ ನಾಯಕಿಯರ ಹುಡುಕಾಟದಲ್ಲಿದೆ 'ಪುಷ್ಪಾ 2' ಚಿತ್ರತಂಡ; ಯಾವ ನಟಿಗೆ ಸಿಗಲಿದೆ ಈ ಅವಕಾಶ?

Untitled design - 2023-08-05T175159.470
Published on

ಆಂಧ್ರಪ್ರದೇಶ: ಟಾಲಿವುಡ್​ನ ಸೈಲಿಶ್​ ಸ್ಟಾರ್​, ಐಕಾನ್​ ಸ್ಟಾರ್​, ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪಾ 2' ಚಿತ್ರದ ಐಟಂ ಸಾಂಗ್​ಗೆ ನಟಿಯ ಹುಡುಕಾಟಲ್ಲಿ ಇದೀಗ ಚಿತ್ರತಂಡ ತೊಡಗಿದ್ದು, ಮಾಹಿತಿಯ ಪ್ರಕಾರ ಚಿತ್ರ ತಯಾರಕರು ಈ ಹಾಡಿಗೆ ನಾಯಕಿಯನ್ನು ತರುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದೆ 'ಪುಷ್ಪಾ 1' ರಲ್ಲಿ ಉಂ ಅಂಟವಾ ಐಟಂ ಸಾಂಗ್​ನಲ್ಲಿ ನಟಿ ಸಮಂತಾ ಮಿಂಚಿದ್ದರು. ಈ ಹಾಡು ಬ್ಲಾಕ್​ಬಸ್ಟರ್​ ಹಿಟ್ ಆಗಿತ್ತು. ಇದೀಗ ಅದೇ ರೀತಿ ಚಿತ್ರದ ಎರಡನೇ ಭಾಗದ ಐಟಂ ಸಾಂಗ್​ಗೆ ಹೊಸ​ ನಾಯಕಿಯನ್ನು ಚಿತ್ರತಂಡ ಹುಡುಕುತ್ತಿದ್ದು, ಚಿತ್ರದ ನಿರ್ಮಾಪಕರು ಈ ಪ್ರಯತ್ನದಲ್ಲಿ ಪರದಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ನ 'ಕಿಸ್' ಬೆಡಗಿ, ನಟಿ ಶ್ರೀಲೀಲಾ ಅವರನ್ನು ಐಟಂ ಸಾಂಗ್​ಗಾಗಿ ಸಂಪರ್ಕಿಸಲಾಗಿದೆ. ಆದ್ರೆ, ಈ ಆಫರ್​ ಅನ್ನು ಶ್ರೀಲೀಲಾ ನಿರಾಕರಿಸಿದ್ದಾರೆ. ಸದ್ಯ ಇತರ ನಾಯಕಿಯರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಾಡಿನಲ್ಲಿ ಯುವ ನಾಯಕಿಯೊಬ್ಬರು ಮಿಂಚಬೇಕೆಂದು ನಿರ್ದೇಶಕ ಸುಕುಮಾರ್ ಬಯಸಿದ್ದಾರೆ ಎಂದು ಹೇಳಲಾಗಿದೆ. ಸಾಂಗ್​ನಲ್ಲಿ ಯಾವ ನಟಿ ಆಯ್ಕೆಯಾಗಲಿದ್ದಾರೆ? ಸಿನಿಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

'ಪುಷ್ಪ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಫಹದ್​ ಫಾಸಿಲ್, ವಿಜಯ್ ಸೇತುಪತಿ, ಅನುಸೂಯಾ ಭಾರಧ್ವಾಜ್​, ಧನಂಜಯ್​ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net