ಟಿಕೆಟ್ ಬುಕಿಂಗ್ ಗೆ ಜನರ ಅತ್ಯುತ್ಸಾಹ: ರೈಲ್ವೆ ಇಲಾಖೆಯ ವೆಬ್ ಸೈಟೇ ಕ್ರ್ಯಾಶ್!

RAILU download
Published on

ನವದೆಹಲಿ: ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಐಆರ್​ಸಿಟಿಸಿ ವೆಬ್​ಸೈಟ್​ಗೆ ಲಾಗಿನ್​ ಆಗುವವರ ಸಂಖ್ಯೆ ಅಧಿಕಗೊಂಡ ಹಿನ್ನೆಲೆಯಲ್ಲಿ ವೆಬ್​ಸೈಟ್​ ಕೆಲ ಸ್ಥಗಿತಗೊಂಡಿದೆ.

ವೆಬ್​ಸೈಟ್​ ಸ್ಥಗಿತಗೊಂಡಿದಕ್ಕೆ ವಿಷಾದ ವ್ಯಕ್ತಪಡಿಸಿರುವ ರೈಲ್ವೇ ಮಂಡಳಿ ಶೀಘ್ರದಲ್ಲೇ ವೆಬ್​ಸೈಟ್​ ಸರಿಪಡಿಸುವುದಾಗಿ ಟ್ವಿಟ್​ ಮಾಡಿದೆ.

ವಿಶೇಷ ರೈಲುಗಳಿಗೆ ಸಂಬಂಧಿಸಿದ ಡೇಟಾವನ್ನು ಐಆರ್‌ಸಿಟಿಸಿ ವೆಬ್‌ಸೈಟ್​ಗೆ ಅಪ್​ಲೋಡ್​ ಮಾಡಲಾಗುತ್ತಿದೆ. ಕೆಲವೇ ಸಮಯದಲ್ಲಿ ರೈಲು ಟಿಕೆಟ್​ ಬುಕ್ಕಿಂಗ್​ ಲಭ್ಯವಾಗಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಕೇವಲ ಪ್ಯಾಸೆಂಜರ್​ ರೈಲುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net