ರಾಹುಲ್‌ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

bjp protest
ಭದ್ರಾವತಿ ತಾಲೂಕು ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿ.ಧರ್ಮಪ್ರಸಾದ್, ರಾಜಶೇಖರ ಉಪ್ಪಾರ್, ಮಂಜುನಾಥ್ ಕದಿರೇಶ್, ಬಿ.ಕೆ.ಶ್ರೀನಾಥ್ ಇತರರಿದ್ದರು.
Published on

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರು ಓಬಿಸಿ ಜಾತಿಗೆ ಸೇರಿದವರಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಸಾರ್ವಜನಿಕವಾಗಿ ಹೇಳುವ ಮೂಲಕ ಪ್ರಧಾನಿಗಳಿಗೆ ಅವಮಾನ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಬಿಜೆಪಿ ಓಬಿಸಿ ಮೋರ್ಚಾ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನರೇಂದ್ರ ಮೋದಿ ಅವರು ಮೋದ್. ಕಾಂಚಿ, ತೇಲಿ, ತೈಲಿ ಸಮುದಾಯದ ಉಪಜಾತಿಯಾಗಿದ್ದು ಅವರು ಗುಜರಾತಿನ ಮುಖ್ಯಮಂತ್ರಿಯಾಗುವ ಮುಂಚೆಯೆ ಸದರಿ ಸಮುದಾಯವನ್ನು ಓಬಿಸಿ ಸಮುದಾಯವನ್ನಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳು ಘೋಷಣೆ ಮಾಡಿವೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಅತ್ಯಂತ ಉನ್ನತ ಸ್ಥಾನದಲ್ಲಿರುವ ರಾಹುಲ್‌ಗಾಂಧಿ, ಮೋದಿ ಅವರು ಓಬಿಸಿ ಜಾತಿಗೆ ಸೇರಿದವರಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ತಕ್ಷಣ ರಾಹುಲ್‌ಗಾಂಧಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ ಉಪ್ಪಾರ್, ಮಂಜುನಾಥ್ ಕದಿರೇಶ್, ಬಿ.ಕೆ.ಶ್ರೀನಾಥ್, ಬಿ.ಜಿ.ಈಶ್ವರ್, ಅಣ್ಣಪ್ಪ, ಗುಜ್ಜರ್, ಕದಿರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net