ಸ್ಯಾನಿಟರಿ ಪ್ಯಾಡ್‌ ಪ್ಯಾಕೆಟ್​ಗಳ ಮೇಲೆ ರಾಹುಲ್​ಗಾಂಧಿ ಫೋಟೋ; ಇದು ನಕಲಿ ಎಂದ ಕಾಂಗ್ರೆಸ್| Rahul gandhi

Untitled design (2)
Published on

ಬಿಹಾರ: ಬಿಹಾರ ರಾಜ್ಯ ಚುನಾವಣೆಗೆ ಮುನ್ನ, ಮಹಿಳಾ ಮತದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಒಂದು ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗ್ತಿದೆ. ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ, ಪಕ್ಷವು ರಾಜ್ಯಾದ್ಯಂತ ಐದು ಲಕ್ಷ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಿದೆ ನಿರ್ಧರಿಸಿದೆ ಎಂಬ ಸುದ್ದಿ ಸಂಚಲನ ಸೃಷ್ಠಿಸುತ್ತಿದ್ದಂತೆ, ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಅನ್ನು ಅನ್‌ಬಾಕ್ಸ್ ಮಾಡಲಾಗುತ್ತಿದ್ದು, ಪ್ಯಾಡ್‌ನ ಒಳಭಾಗದಲ್ಲಿ ರಾಹುಲ್ ಗಾಂಧಿಯವರ ಚಿತ್ರ ಮುದ್ರಿಸಲಾಗಿರುವುದು ಕಂಡುಬಂದಿದೆ. ವಿಡಿಯೋದ ಸತ್ಯವನ್ನು ಕಾಂಗ್ರೆಸ್ ಪರಿಶೀಲಿಸಿದ್ದು, ಅದನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್‌ ಹೇಳಿದ್ದೇನು?

ಈ ವೈರಲ್‌ ವಿಡಿಯೋ ಬಗ್ಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ ಪ್ರತಿಕ್ರಿಯಿಸಿದ್ದು, ಬಾಕ್ಸ್‌ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಚಿತ್ರವಿದೆ. ವಿತರಣೆಯಲ್ಲಿ ನಮಗೆ ಸಹಾಯ ಮಾಡುತ್ತಿರುವ ನಮ್ಮ ಶಾಸಕರು, ಸಹೋದರರು, ತಂದೆಯರ ಚಿತ್ರವಿರುತ್ತದೆ. ಅವರ ವೈಫಲ್ಯವನ್ನು ಮರೆಮಾಡಲು, ರಾಹುಲ್ ಗಾಂಧಿ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net