ತೆಲಂಗಾಣ ಚುನಾವಣೆ; ಯುವಕರ ಜತೆ ರಾಹುಲ್ ಗಾಂಧಿ ಸಂವಾದ; ಮುಂದಿನ ಪ್ರಧಾನಿ ನೀವೇ ಎಂದ ಜನಸ್ತೋಮ

Rahul Gandhi
Published on

ಹೈದರಾಬಾದ್: ಮುಂಬರುವ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಚುನಾವಣೆಯ ಹೊಸ್ತಿಲಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಒಂದಿಲ್ಲೊಂದು ತಂತ್ರಕ್ಕೆ ಕೈ ಹಾಕುತ್ತಿರುವ ಕಾಂಗ್ರೆಸ್​ ಪಕ್ಷದ ನಾಯಕರು ತುಸು ಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಇದೀಗ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೈದರಾಬಾದಿನ ಪ್ರತಿಷ್ಠಿತ ಹೋಟೆಲ್​ ಒಂದಕ್ಕೆ ಭೇಟಿ ನೀಡಿದ್ದು, ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆರೆದಿದ್ದವರು ರಾಹುಲ್​ ಅವರನ್ನು ಪಿಎಂ ಪಿಎಂ ಎಂದು ಕರೆಯುತ್ತಿರುವುದನ್ನು ನೋಡಬಹುದಾಗಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್​ ನೀಡಿದ್ದು, ಈ ವೇಳೆ ಅವರು ಯುವಕರ ಜೊತೆ ಸಂವಾದ ನಡೆಸಿದ್ದಾರೆ. ಇತ್ತ ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಬಿಆರ್​ಎಸ್​ ನಾಯಕರು ಈ ರೀತಿಯ ಕೆಲಗಳನ್ನು ಮಾಡಿ ಮತ ಪಡೆಯಬಹುದು ಎಂದು ಊಹಿಸಿದ್ದರೆ ಅದು ನಿಮ್ಮ ತಪ್ಪು. ಜನ ಮಾತನಾಡುವವರಿಗಿಂತ ಕೆಲಸ ಮಾಡುವವರಿಗೆ ಮತ ಹಾಕುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net