More

    ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ: ಮುರುಗೇಶ್ ನಿರಾಣಿ

    ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಬಾರೀ ಗದ್ದಲ ಎಬ್ಬಸಿರುವ ಜಾತಿಗಣತಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮುರುಗೇಶ್​ ನಿರಾಣಿ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಬಾಗಲಕೋಟೆಯಲ್ಲಿ ಈ ಕುರಿತು ಮಾತನಾಡಿದ ಅವರು, ಈಗಾಗಲೇ ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್ ನ ಹಿರಿಯರು,ವೀರಶೈವ ಸಮಾಜದ ಪ್ರಮುಖರು ಶಾಮನೂರು ಶಿವಶಂಕ್ರಪ್ಪನವರೇ ಹೇಳಿದ್ದಾರೆ. ಅವರು ಅದೇ ಪಕ್ಷದಲ್ಲಿ ಇದ್ದುಕೊಂಡು ಇದು ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ.

    ರಾಜ್ಯದಲ್ಲಿ ಅಂದಾಜು 1.30 ಕೋಟಿ ಜನ ವೀರಶೈವ ಲಿಂಗಾಯತರಿದ್ದಾರೆ. ಆದರೆ, ಕಾಂಗ್ರೆಸ್​ನವರು ಬರೀ 60 ಲಕ್ಷ ಜನರಿರುವುದು ಎಂದು ತೋರಿಸಲು ಹೊರಟ್ಟಿದ್ದಾರೆ. ಕರ್ನಾಟಕ ರಾಜ್ಯದ ಏಳು ಕೋಟಿ ಜನರಲ್ಲಿ ಅಂದಾಜು 26% ವೀರಶೈವ ಲಿಂಗಾಯತ ಸಮಾಜವಿದೆ. ಈಗ ಇರುವ ಜನಸಂಖ್ಯೆಗಿಂತ ಶೇ.50ರಷ್ಟು ಕಡಿಮೆ ಇರುವುದಾಗಿ ತೋರಿಸಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಮಾಸದ ಕರಾಳತೆಯ ನೆನಪು; ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ

    ಹೀಗೆ ತಮಗೆ ಬೇಕಾದ ಸಮಾಜವನ್ನು ಡಬಲ್ ಆಗಿ ತೋರಿಸೋದು ಬೇಡದೆ ಇರುವ ಸಮಾಜವನ್ನು ಕಮ್ಮಿ ತೋರಿಸುವ ಹುನ್ನಾರ ನಡೆದಿದೆ. ಕಾಂಗ್ರೆಸ್​ನವರು 2018ರಲ್ಲಿ ಡಿವೈಡ್ ಮಾಡಲು ಹೋಗಿ ಹೀನಾಯವಾಗಿ ಸೋತಿದ್ದಾರೆ. ಈಗ ನೋಡಿದರೆ ಜಾತಿಗಣತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿರುವ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ. ಸ್ವತಃ ಕಾಂಗ್ರೆಸ್​ ಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಘೋಷಿಸಲಾಗಿದ್ದು, ಈವರೆಗೆ ಸರಿಯಾಗಿ ಜಾರಿಯಾಗಿಲ್ಲ. ಈ ಸರ್ಕಾರಕ್ಕೆ ಏಳು ಕೋಟಿ ಜನ ಸಾಫ ಹಾಕುತ್ತಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತ ಇದಕ್ಕೆ ತಕ್ಕ ಉತ್ತರ ಕೊಡಲಿದ್ದು, ಬಿಜೆಪಿ 28 ಸ್ಥಾನಗಳಲ್ಲಿ ಗೆಲ್ಲುವುದು ಪಕ್ಕಾ ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಭವಿಷ್ಯ ನುಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts