More

    ಲಾಂಚ್​ಗೂ ಮುನ್ನವೇ ರೋಲ್​ ರಾಯ್ಸ್​ ಸ್ಪೆಕ್ಟರ್​ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್​ ಎಂದ ನೆಟ್ಟಿಗರು

    ಚೆನ್ನೈಃ ಪ್ರಪಂಚದಾದ್ಯಂತ ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ಖ್ಯಾತ ಕ್ರೀಡಾಪಟುಗಳಿಗೆ ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳು ಕನಸಿನ ವಾಹನವಾಗಿದ್ದು, ಅವರ ಶ್ರೀಮಂತಿಕೆಯ ಸಂಕೇತವಾಗಿದೆ. ಇದೀಗ ಚೆನ್ನೈನ ಮೂಲದ ಉದ್ಯಮಿಯೊಬ್ಬರು, ಭಾರತದಲ್ಲಿಯೇ ಮೊದಲ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

    ಬ್ರಿಟಿಷ್ ವಾಹನ ತಯಾರಕ ರೋಲ್ಸ್​ ರಾಯ್​ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರುಇದಾಗಿದ್ದು, ಭಾರತ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಕಾರನ್ನು ತಮಿಳುನಾಡಿನ ಚೆನ್ನೈ ಮೂಲದ ಖ್ಯಾತ ಬಿಲ್ಡರ್​ ಭಾಷ್ಯಂ ಕನ್ಸ್​​ಟ್ರಕ್ಷನ್​ ಮಾಲೀಕ ಭಾಷ್ಯಂ ಯುವರಾಜ್​ ಖರೀದಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

    ಇದನ್ನೂ ಓದಿ: ಬೆಂಗಳೂರು ಕಂಬಳ ನೋಡಿ ವಾಪಸ್ಸಾಗುತ್ತಿದ್ದವರ ಕಾರಿಗೆ ಲಾರಿ ಡಿಕ್ಕಿ; ಇಬ್ಬರ ಸಾವು

    ಉದ್ಯಮಿಯೊಬ್ಬರು ಕಾರು ಖರೀದಿಸುವುದರಲ್ಲಿ ಏನು ವಿಶೇಷ ಎಂದು ಕೇಳುತ್ತೀರಾ. ಸಾಮಾನ್ಯವಾಗಿ ಉದ್ಯಮಿಗಳು ದುಬಾರಿ ಕಾರು ಅಥವಾ ಬೈಕ್​ಗಳನ್ನು ಡೆಲಿವರಿ ಪಡೆಯುವಾಗ ಅದ್ದೂರಿಯಿಂದ ಅದನ್ನು ತೆಗೆದುಕೊಳ್ಳುತ್ತಾರೆ. ಆದರೆ, ಉದ್ಯಮಿ ಚಪ್ಪಲ್​ ಧರಿಸಿ ಕಾರ್​ ಡೆಲಿವರಿ ಪಡೆದಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತ ಉದ್ಯಮಿಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಸ್ವ್ಯಾಗ್​ ಎಂದು ಕಮೆಂಟ್​ ಮಾಡಿದ್ದಾರೆ.

    ಭಾರತದ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಅಧಿಕೃತವಾಗಿ ಈ ಕಾರನ್ನು ಲಾಂಚ್ ಮಾಡಿಲ್ಲ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ರೂ.9 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಸುಮಾರು ರೂ.10.5 ಕೋಟಿ ಆನ್ – ರೋಡ್ ಬೆಲೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಬೆಲೆಗೆ ಸರಿಹೊಂದುವಂತೆ ಈ ಕಾರು, ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts