ಡೊನಾಲ್ಡ್​​ ಟ್ರಂಪ್​ ನಿರ್ದೇಶನ ಅನುಸರಿಸಿ ಪ್ರಧಾನಿ ಮೋದಿ ಕಾರ್ಯಾಚರಣೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ ವಿಪಕ್ಷ ನಾಯಕ ರಾಹುಲ್​ ! | Rahul Gandhi

Rahul Gandhi
Published on

Rahul Gandhi: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನಗಳನ್ನು ಅನುಸರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ (ಆಗಸ್ಟ್​​ 27) ಆರೋಪಿಸಿದ್ದಾರೆ.

ಮತದಾರರ ಅಧಿಕಾರ ಯಾತ್ರೆಯ ಭಾಗವಾಗಿ ಬಿಹಾರದ ಮಜಫರ್‌ಪುರದ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್, ಮೇ ತಿಂಗಳಲ್ಲಿ ನಡೆದ ಮಿಲಿಟರಿ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದು, ಪರಮಾಣು ಚಾಲಿತ ಎರಡು ನೆರೆಹೊರೆಯವ ದೇಶಗಳ ನಡುವಿನ ಕದನಕ್ಕೆ ತಾವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಪ್ರಧಾನಿ ಮೋದಿಯನ್ನು ಪಾಕ್​​ ಜೊತೆ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲು ಸುಂಕದ ಬೆದರಿಕೆಗಳನ್ನು ಬಳಸಿದ್ದೇನೆ ಎಂದು ಟ್ರಂಪ್​​ ಹೇಳಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ, ಪ್ರಧಾನಿ ಮೋದಿಗೆ ಕರೆ ಮಾಡಿ, 24 ಗಂಟೆಗಳ ಒಳಗೆ ನೀವು ಏನು ಮಾಡುತ್ತಿದ್ದರೂ ಅದನ್ನು ನಿಲ್ಲಿಸುವಂತೆ ಹೇಳಿದೆ ಎಂದು ಟ್ರಂಪ್ ಮಂಗಳವಾರ (ಆಗಸ್ಟ್​​ 27) ಹೇಳಿಕೊಂಡಿದ್ದು, ಟ್ರಂಪ್​​ ಮಾತಿಗೆ ಮಣಿದ ಮೋದಿ, ಕೇವಲ ಐದು ಗಂಟೆಗಳಲ್ಲಿ ಎಲ್ಲವನ್ನೂ ನಿಲ್ಲಿಸಿದರು ಎಂದು ರಾಹುಲ್​ ಆರೋಪಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net